ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯದತ್ತ ತಿರುಗಿದ ಮುಂಬೈ ಹಿಂಸಾಚಾರ
ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಕಾರ್ಯಕರ್ತರಿಂದ ನಡೆದ ಮುಂಬೈ ಹಿಂಸಾಚಾರ, ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಉಂಟು ಮಾಡುವತ್ತ ಸಾಗಿದೆ. ನವನಿರ್ಮಾಣ ವೇದಿಕೆಯ ಅಧ್ಯಕ್ಷ ರಾಜ್ ಠಾಕ್ರೆ, ಮುಂಬೈನಲ್ಲಿ ಇರುವ ವಲಸಿಗ ಉತ್ತರ ಭಾರತೀಯರ ವಿರುದ್ಧ ಮಾಡಿರುವ ಟೀಕೆಗೆ ಪ್ರತಿಯಾಗಿ ಸಮಾಜವಾದಿ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ನವನಿರ್ಮಾಣ ವೇದಿಕೆ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರ ನಡುವೆ ಮುಂಬೈ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಗುಂಪು ಘರ್ಷಣೆಗಳು ನಡೆದಿವೆ ಎಂದು ವರದಿಯಾಗಿವೆ

ಗೋರಖಪುರ್‌ನಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ರಾಜ್ ಠಾಕ್ರೆಯ ಪ್ರತಿಕೃತಿ ದಹನ ಮಾಡುವ ಯತ್ನ ಮಾಡಿದರು. ಮುಂಬೈನ ಕೊಲಾಬಾದಲ್ಲಿ ಇರಿಸಲಾಗಿದ್ದ ರಾಜ್ ಠಾಕ್ರೆಯ ಕಟೌಟ್‌ವೊಂದನ್ನು ಸ.ಪ ಕಾರ್ಯಕರ್ತರು ಹರಿದು ಹಾಕಿದ್ದಾರೆ.

ರವಿವಾರ ಸಂಭವಿಸಿದ ಹಿಂಸಾಚಾರಗಳಿಗೆ ಹೋಲಿಸಿದಲ್ಲಿ ಸೋಮವಾರ ಮುಂಬೈನಲ್ಲಿ ಶಾಂತಿ ನೆಲೆಸಿತ್ತು ಆದರೂ ಪರಿಸ್ಥಿತಿ ತ್ವೇಷಮಯವಾಗಿತ್ತು.

ಉತ್ತರ ಭಾರತದಲ್ಲಿ ಪ್ರತಿಭಟನೆ
ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಪಕ್ಷಗಳು ಠಾಕ್ರೆಯ ಹೇಳಿಕೆ ವಿರುದ್ಧ ಉತ್ತರ ಭಾರತದಲ್ಲಿ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರಕಿಭಟನೆ ನಡೆಸಿವೆ. ಪ್ರತಿಭಟನೆಯನ್ನು ಗೋರಖ್‌ಪುರ್, ಜೇಮ್ಶಡಪುರಗಳಲ್ಲಿ ಆಯೋಜಿಸಲಾಗಿತ್ತು.

ರಾಜ್ ವಿರುದ್ಧ ದೂರು, ಎಂಎನ್‌ಎಸ್ ಮಾನ್ಯತೆ ರದ್ದು
ರಾಜ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಭಾರತೀಯ ಸಂವಿಧಾನದತ್ತ ಬದ್ಧತೆಯನ್ನು ಹೊಂದಿಲ್ಲ ಎನ್ನುವುದು ಉತ್ತರ ಭಾರತೀಯರ ವಿರುದ್ಧದವರ ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದ್ದು. ಆದ್ದರಿಂದ ನವನಿರ್ಮಾಣ ಸೇನೆಯ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಸಮಾಜವಾದಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಮರಾಠಿಯೇತರರ ವಿರುದ್ಧ ರಾಜ್ ಠಾಕ್ರೆ ಪ್ರಚೋದನಕಾರಿ ಹೇಳಿಕೆ ನೀಡಿ, ಹಿಂಸಾಚಾರಕ್ಕೆ ಮುಂದಾಗುವಂತೆ ಪಕ್ಷದ ಕಾರ್ಯಕರ್ತರು ಚೀತಾವಣೆ ಹೂಡುತ್ತಿದ್ದಾರೆ ಎಂದು ತಮ್ಮ ನ್ಯಾಯವಾದಿ ಪ್ರದೀಪ್ ರಾಯ್ ಅವರೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ಮತ್ತಷ್ಟು
ಮೂಕ ಪ್ರೇಕ್ಷಕರಾಗಿರುವ ಸಚೇತಕರು: ಅನ್ಸಾರಿ ವಿಷಾದ
ಜಲ್ಲಿಕಟ್ಟು; 95 ಮಂದಿಗೆ ಗಾಯ
ಕಿಡ್ನಿ ಹಗರಣ; ಕೇಂದ್ರದ ಅಧಿಸೂಚನೆಗೆ ಸಿಬಿಐ ನಿರೀಕ್ಷೆ
ನಕ್ಸಲ್ ನಿಗ್ರಹಕ್ಕೆ ಸೇನೆ ನಿಯೋಜನೆ ಇಲ್ಲ: ಅಂಟನಿ
ಹಿಂಸಾಚಾರದ ತನಿಖೆ; ಡಿಜಿಪಿಗೆ ದೇಶಮುಖ ಆದೇಶ
ಮೂಲ ಭಾರತೀಯರ ಬೆಂಬಲವಿಲ್ಲ ಬಡಾವಿ ಶಂಕೆ