ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುನರ್‌ನಿರ್ಮಾಣಕ್ಕೆ ಕೈಜೋಡಿಸಲು ಪ್ರಣಬ್ ಕರೆ
PIB
ಮೂಲಭೂತವಾದಿಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಇಂದು ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಮೂಲಭೂತವಾದದಿಂದ ಸಂಪೂರ್ಣ ನಾಶಗೊಂಡಿರುವ ಆಫಘಾನಿಸ್ತಾನದ ಪುನರ್ ನಿರ್ಮಾಣ ಕಾರ್ಯಕ್ರಮದಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು 800 ಮಿಲಿಯನ್ ಡಾಲರ್ ನೆರವು ನೀಡುವುದಕ್ಕೆ ಭಾರತ ಬದ್ಧವಾಗಿದ್ದು, ಸುಮಾರು ಮೂರುವರೆ ಸಾವಿರ ಭಾರತೀಯರು ಆಪಘಾನಿಸ್ತಾನದಲ್ಲಿ ನಡೆಯುತ್ತಿರುವ ವಿವಿದ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಫ್ಘನ್ ಅಭಿವೃದ್ದಿಯ ವಿಚಾರದಲ್ಲಿ ಭಾರತ ಅಂತರಾಷ್ಟ್ರೀಯ ಸಮುದಾಯದ ಸಹಕಾರದೊಂದಿಗೆ ಪುನರ್ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಿದ್ದೆವೆ ಎಂದು ಕೇಂದ್ರ ರಕ್ಷಣಾ ಸಚಿವ ಪ್ರಣಬ್ ಮುಖರ್ಜಿ ಅವರು ಹೇಳಿದರು.

ಆಫಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಪುನರ್ ನಿರ್ಮಾಣ ಕಾರ್ಯದ ವೇಗ ಚುರುಕುಗೊಳ್ಳಬೇಕಿದೆ. ಹಿಂಸಾ ಪೀಡಿತ ದೇಶಗಳಲ್ಲಿನ ಪುನರ್ ನಿರ್ಮಾಣ ಕಾರ್ಯ ವಿಫಲಗೊಂಡಲ್ಲಿ ಅದು ಪಶ್ಚಿಮ ಏಷ್ಯಾದ ಶಾಂತಿ, ಸುವ್ಯವಸ್ಥೆ ಮತ್ತು ಸಮಗ್ರತೆಗೆ ದಕ್ಕೆ ತರಲಿದೆ. ವಿಫಲ ಪುನರ್ ನಿರ್ಮಾಣ ಕಾರ್ಯಕ್ರಮ ಪ್ರಾದೇಶಿಕ ಅಸ್ಥಿರತೆಯ ಜೊತೆಗೆ ಇಂಧನ ಮೂಲಗಳನ್ನು ದ್ವಂಸಗೊಳಿಸುವ ಮೂಲಕ ಅಂತರಾಷ್ಟ್ರೀಯ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಮಾಡಬಹುದು.

ಈಗಾಗಲೇ ನೂರು ಡಾಲರ್ ಗಡಿಯನ್ನು ದಾಟಿರುವ ಇಂಧನ, ಭವಿಷ್ಯತ್ತಿನ ದಿನಗಳಲ್ಲಿ ಪೂರ್ಣವಾಗಿ ನಶಿಸಿ ಹೋಗಲಿದೆ. ರಾಜಕೀಯ ಮತ್ತು ರಾಜಕೀಯೇತರ ಶಕ್ತಿಗಳು ಶಕ್ತಿ ಸಂಪನ್ಮೂಲದ ಪೂರೈಕೆಗೆ ತಡೆ ಹಾಕಬಹುದು. ಶಕ್ತಿ ಸಂಪನ್ಮೂಲಕ್ಕೆ ಪರ್ಶಿಯನ್ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿರುವ ಏಷಿಯಾದ ರಾಷ್ಟ್ರಗಳು ಮುಂಬರುವ ದಿನಗಳಲ್ಲಿ ಅತಂತ್ರ ಪರಿಸ್ಥಿತಿಯನ್ನು ಎದುರಿಸಬಹುದು ಎಂದು ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ಸ್‌ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆಂಡ್ ಅನಾಲಿಸಿಸ್ ಆಯೋಜಿಸಲಿರುವ ಮೂರು ದಿನಗಳ ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮತ್ತಷ್ಟು
ಹೊಸ ಅಣ್ವಸ್ತ್ರ ರಾಷ್ಟ್ರಗಳ ಉದಯಕ್ಕೆ ಭಾರತ ವಿರೋಧ
ಕ್ಷೇತ್ರ ಪುನಾರಚನೆ: ಕೇಂದ್ರಕ್ಕೆ ಸು. ಕೋ ಗಡುವು
ರಾಜಕೀಯದತ್ತ ತಿರುಗಿದ ಮುಂಬೈ ಹಿಂಸಾಚಾರ
ಮೂಕ ಪ್ರೇಕ್ಷಕರಾಗಿರುವ ಸಚೇತಕರು: ಅನ್ಸಾರಿ ವಿಷಾದ
ಜಲ್ಲಿಕಟ್ಟು; 95 ಮಂದಿಗೆ ಗಾಯ
ಕಿಡ್ನಿ ಹಗರಣ; ಕೇಂದ್ರದ ಅಧಿಸೂಚನೆಗೆ ಸಿಬಿಐ ನಿರೀಕ್ಷೆ