ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂದಹಾರ್ ವಿಮಾನಾಪಹರಣ: ಮೂವರಿಗೆ ಜೀವಾವಧಿ
1999ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಪಾತ್ರ ವಹಿಸಿದ್ದ ಮೂವರು ಆರೋಪಿಗಳಿಗೆ ಪಾಟಿಯಾಲಾ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿಮಾನವನ್ನು ಅಪ್ಘಾನಿಸ್ತಾನದ ಕಂದಹಾರ್‌ಗೆ ಅಪಹರಿಸಿದ ಪ್ರಧಾನ ಆರೋಪಿಗಳಿನ್ನೂ ಪತ್ತೆಯಾಗಿಲ್ಲ. ಆದರೆ ಪ್ರಕರಣದಲ್ಲಿ ಪಾತ್ರ ವಹಿಸಿದ್ದ ಆರೋಪದಲ್ಲಿ ಅಬ್ದುಲ್ ಲತೀಫ್, ದಿಲೀಪ್ ಕುಮಾರ್ ಹಾಗೂ ಯೂಸುಫ್ ನೇಪಾಳಿ ಎಂಬವರು ಬಂಧಿತರಾಗಿ ಪಾಟಿಯಾಲಾ ಜೈಲಿನಲ್ಲಿದ್ದರು.

ಐವರು ಪ್ರಧಾನ ಆರೋಪಿಗಳಿಗೆ ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಡಲಾಗಿದ್ದರೆ, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.

ಈ ವಿಮಾನ ಅಪಹರಣವು ಕುಖ್ಯಾತ ಭಯೋತ್ಪಾದಕರಾದ ಮಸೂದ್ ಅಜರ್ ಮುಷ್ತಾಕ್, ಅಹ್ಮದ್ ಜರ್ಗಾರ್ ಹಾಗೂ ಶೇಖ್ ಅಹ್ಮದ್ ಉಮರ್ ಸಯೀದ್ ಎಂಬವರನ್ನು ಭಾರತದ ಜೈಲುಗಳಿಂದ ಬಿಡುಗಡೆ ಮಾಡುವುದರೊಂದಿಗೆ ಕೊನೆಗೊಂಡಿತ್ತು. ಮೊದಲನೇ ದಿನವೇ ಒಬ್ಬ ಪ್ರಯಾಣಿಕ ರೂಪೇನ್ ಕತ್ಯಾಲ್‌ನನ್ನು ಅಪಹರಣಕಾರರು ಕೊಂದು ಹಾಕಿದ್ದರೆ, ಸತ್ನಾಮ್ ಸಿಂಗ್ ಎಂಬಾತನಿಗೆ ಉಗ್ರಗಾಮಿಗಳು ಒಂಬತ್ತು ಬಾರಿ ಇರಿದಿದ್ದರು. ಉಳಿದ 189 ಮಂದಿ ಪ್ರಯಾಣಿಕರು ಕೊನೆಗೆ ಸುರಕ್ಷಿತವಾಗಿ ಬಿಡುಗಡೆಯಾಗಿದ್ದರು.

ಮೂವರಲ್ಲಿ ಅತ್ಯಂತ ಭಯಾನಕ ಉಗ್ರಗಾಮಿಯಾಗಿದ್ದ ಮಸೂದ್ ಅಜರ್, ಬಿಡುಗಡೆಯ ತಕ್ಷಣವೇ ಜೈಶ್ ಎ ಮಹಮದ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದು, ಅದು ಜಮ್ಮು ಕಾಶ್ಮೀರ ಮತ್ತು ಭಾರತದ ವಿವಿಧೆಡೆ ತನ್ನ ಜಾಲವನ್ನು ಅತ್ಯಂತ ನಾಜೂಕಾಗಿ ವಿಸ್ತರಿಸಿಕೊಳ್ಳುತ್ತಿದೆ.

ಐಸಿ 814 ವಿಮಾನ ಅಪಹರಣವಾದ 8 ತಿಂಗಳ ಬಳಿಕ, ಇದೀಗ ಸೆರೆ ಸಿಕ್ಕ ಮೂವರು ಅಷ್ಟೇನೂ ಪ್ರಧಾನ ಪಾತ್ರ ವಹಿಸದ ಆರೋಪಿಗಳಿಗೆ ಶಿಕ್ಷೆಯಾಗಿದೆ. ಮೌಲಾನಾ ಮಸೂದ್ ಅಜರ್‌ನ ಸಹೋದರ ಇಬ್ರಾಹಿಂ ಅತರ್ ಎಂಬಾತ ಇದೀಗ ಸಕ್ರಿಯನಾಗಿದ್ದು, ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿ ಉತ್ತರ ಪ್ರದೇಶದಲ್ಲಿ ಹಾಗೂ ಕಾಶ್ಮೀರದಲ್ಲಿ ಜೈಶ್ ಸಂಘಟನೆಯನ್ನು ಬಲಪಡಿಸುತ್ತಿದ್ದಾನೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ಮತ್ತಷ್ಟು
ಪುನರ್‌ನಿರ್ಮಾಣಕ್ಕೆ ಕೈಜೋಡಿಸಲು ಪ್ರಣಬ್ ಕರೆ
ಹೊಸ ಅಣ್ವಸ್ತ್ರ ರಾಷ್ಟ್ರಗಳ ಉದಯಕ್ಕೆ ಭಾರತ ವಿರೋಧ
ಕ್ಷೇತ್ರ ಪುನಾರಚನೆ: ಕೇಂದ್ರಕ್ಕೆ ಸು. ಕೋ ಗಡುವು
ರಾಜಕೀಯದತ್ತ ತಿರುಗಿದ ಮುಂಬೈ ಹಿಂಸಾಚಾರ
ಮೂಕ ಪ್ರೇಕ್ಷಕರಾಗಿರುವ ಸಚೇತಕರು: ಅನ್ಸಾರಿ ವಿಷಾದ
ಜಲ್ಲಿಕಟ್ಟು; 95 ಮಂದಿಗೆ ಗಾಯ