ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಸತ್ ದಾಳಿ: ಶೌಕತ್‌ಗೆ ಎರಡು ವಾರಗಳ ಗಡುವು
ಸಂಸತ್ ದಾಳಿ ಪ್ರಕರಣದಲ್ಲಿ ಶೌಕತ್ ಹುಸ್ಸೇನ್‌ಗೆ ಹತ್ತು ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿರುವ ಸುಪ್ರೀಮ್ ಕೋರ್ಟ್, ದಾಳಿಯಲ್ಲಿ ಆರೋಪಿತ ಎಂದು ಸಾಬೀತಾಗಿರುವುದಕ್ಕೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.

ನ್ಯಾಯಮೂರ್ತಿ ಪಿ ಪಿ ನವಲೇಕರ್ ನೇತೃತ್ವದ ವಿಭಾಗೀಯ ಪೀಠದ ಎದುರು ದೆಹಲಿ ಪೊಲೀಸರ ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳು ಶೌಕತ್ ಅವರಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಸಮರ್ಥಿಸಿಕೊಂಡರು. ಆಪಾದಿತ ಶೌಕತ್‌ಗೆ ಸಂಸತ್ ಮೇಲೆ ದಾಳಿ ಮಾಡುವ ಷಡ್ಯಂತ್ರ ಅರಿವು ಇದ್ದರೂ ಕೂಡ ಉದ್ದೇಶಪೂರ್ವಕವಾಗಿ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ತಮ್ಮ ವಾದ ಮಂಡಿಸಿದರು.

ಶೌಕತ್‌ ಹುಸ್ಸೇನ್ ವಿರುದ್ಧ ವಾದಿಸಿದ ನ್ಯಾಯವಾದಿಗಳು ಈ ಮೊದಲು ಆಪಾದಿತನು ಸಲ್ಲಿಸಿದ್ದ ಪರೀಶಿಲನಾ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ತಿರಸ್ಕರಿಸಿದೆ ಎಂದು ವಾದಿಸಿದರು. ಪ್ರತಿಯಾಗಿ ಆಪಾದಿತ ಶೌಕತ್ ಭಾರತೀಯ ದಂಡ ಸಂಹೀತೆ 123 (ಎ) ಅಡಿಯಲ್ಲಿ ತನ್ನ ವಿರುದ್ಧ ದೋಷಾರೋಪಣೆ ಸಲ್ಲಿಸಿಲ್ಲ. ಮತ್ತು ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಅವಕಾಶ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ತನ್ನ ಹೇಳಿಕೆ ನೀಡಿದ್ದಾನೆ.

ದೆಹಲಿ ಉಚ್ಚ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಗೆ ಒಳಗಾಗಿದ್ದ ಶೌಕತ್ ಹುಸ್ಸೇನ್, ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ಮರಣ ದಂಡನೆ ವಿರುದ್ಧ ಅರ್ಜಿ ಸಲ್ಲಿಸಿದ್ದನು. ಶೌಕತ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಅಪರಾಧಿಕ ಸಂಚಿನಿಂದ ಶೌಕತ್‌‍ನನ್ನು ಮುಕ್ತಗೊಳಿಸಿ ಹತ್ತು ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು.

ಇದೇ ಸಂಸತ್ ದಾಳಿಯ ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ಗುರುಗೆ ಸರ್ವೋಚ್ಚ ನ್ಯಾಯಾಲಯ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದ್ದು, ಮರಣ ದಂಡನೆಯಿಂದ ರಕ್ಷಿಸಬೇಕು ಎಂದು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಮನವಿಯ ಬಗ್ಗೆ ರಾಷ್ಟ್ರಪತಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
ಮತ್ತಷ್ಟು
ಕಂದಹಾರ್ ವಿಮಾನಾಪಹರಣ: ಮೂವರಿಗೆ ಜೀವಾವಧಿ
ಪುನರ್‌ನಿರ್ಮಾಣಕ್ಕೆ ಕೈಜೋಡಿಸಲು ಪ್ರಣಬ್ ಕರೆ
ಹೊಸ ಅಣ್ವಸ್ತ್ರ ರಾಷ್ಟ್ರಗಳ ಉದಯಕ್ಕೆ ಭಾರತ ವಿರೋಧ
ಕ್ಷೇತ್ರ ಪುನಾರಚನೆ: ಕೇಂದ್ರಕ್ಕೆ ಸು. ಕೋ ಗಡುವು
ರಾಜಕೀಯದತ್ತ ತಿರುಗಿದ ಮುಂಬೈ ಹಿಂಸಾಚಾರ
ಮೂಕ ಪ್ರೇಕ್ಷಕರಾಗಿರುವ ಸಚೇತಕರು: ಅನ್ಸಾರಿ ವಿಷಾದ