ಪೊಲೀಸ್ ಗೋಲಿಬಾರ್ ಖಂಡಿಸಿ ಫಾರ್ವರ್ಡ್ ಬ್ಲಾಕ್ ಕರೆದಿರುವ 24 ಗಂಟೆಗಳ ಬಂದ್ ಕರೆಗೆ ಪಶ್ಟಿಮ ಬಂಗಾಲದ ಜನಜೀವನ ಅಸ್ತವ್ಯಸ್ತಗೊಂಡಿದೆ. ಫಾರ್ವರ್ಡ್ ಬ್ಲಾಕ್ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ಮೇಲೆ ನಡೆದ ಪೊಲೀಸ್ ಗೋಲಿಬಾರಿನಲ್ಲಿ ಆರು ಕಾರ್ಯಕರ್ತರು ಮೃತಪಟ್ಟಿದ್ದರು.
ನ್ಯಾಷನಲ್ ವಾಲ್ಯೂಂಟಿಂರ್ ಫೋರ್ಸ್‌ನ ಕಾರ್ಯಕರ್ತ ಕೃಷ್ಣಕಾಂತ್ ಅವರಿಗೆ ನೀಡಲಾಗುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುವ ಮೂಲಕ ಗೊಲೀಬಾರ್‌ಗೆ ಬಲಿಯಾದವರ ಸಂಖ್ಯೆ ಆರಕ್ಕೆರಿದೆ ಎಂದು ಐಜಿ (ಕಾನೂನು ಮತ್ತು ಸುವ್ಯವಸ್ಥಾಪನೆ) ರಾಜ್ ಕನೋಜಿಯಾ ಬುಧವಾರ ಬೆಳಿಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಆಡಳಿತಾರೂಢ ಎಡಪಕ್ಷಗಳ ಮಿತ್ರ ಪಕ್ಷವಾಗಿರುವ ಫಾರ್ವರ್ಡ್ ಬ್ಲಾಕ್ ಕರೆ ನೀಡಿರುವ ಬಂದ್‌ನಿಂದ ರಾಜ್ಯದಲ್ಲಿ ರೈಲು ಮತ್ತು ರಸ್ತೆ ಸಾರಿಗೆ ವ್ಯತಯಗೊಂಡಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಉಳಿದಂತೆ ವ್ಯವಹಾರದ ಮೇಲೆ ಬಂದ್ ಪ್ರತಿಕೂಲ ಪರಿಣಾಮ ಬೀರಿದ್ದು. ವಹಿವಾಟು ಸ್ಥಗಿತಗೊಂಡಿದೆ. ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ತಡೆ ಹಾಕಿರುವ ಕಾರಣ ಸೆಲ್ಡಾ ಮತ್ತು ಹೌರಾ ವಿಭಾಗದ ರೈಲು ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ವಿಮಾನ ಸಾರಿಗೆಗೆ ಪ್ರತಿಭಟನೆಯಲ್ಲಿ ನಿರತರಾಗಿರುವ ಕಾರ್ಯಕರ್ತರು ತೊಂದರೆ ಮಾಡಿಲ್ಲ ಎಂದು ವಿಮಾನ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1977 ರಿಂದ ಪಶ್ಚಿಮ ಬಂಗಾಲದ ಅಧಿಕಾರ ಸೂತ್ರವನ್ನು ಹಿಡಿದಿರುವ ಎಡ ಪಕ್ಷದ ಪ್ರಮುಖ ಪಕ್ಷ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಿದೆ.
|