ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿ-814 ಅಪಹರಣ: ಮೂವರಿಗೆ ಜೀವಾವಧಿ
ಕಾಂದಹಾರಕ್ಕೆ ತೆರಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು 1999ರ ಡಿಸೆಂಬರ್‌ನಲ್ಲಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯವೊಂದು ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಬ್ದುಲ್ ಲತೀಫ್ ಆದಂ ಮೊಮಿನ್ ಅಲಿಯಾಸ್ ಅಬ್ದುಲ್ ರೆಹ್ಮಾನ್ ಅಲಿಯಾಸ್ ಪಟೇಲ್, ಯೂಸುಫ್ ನೇಪಾಲಿ ಮತ್ತು ದಲಿಪ್ ಭುಜೈಲ್ ಅವರುಗಳಿಗೆ ಸೆಷನ್ಸ್ ನ್ಯಾಯಾಧೀಶ ಇಂದರ್‌ಜಿತ್ ಸಿಂಗ್ ವಾಲಿಯಾ ಈ ಶಿಕ್ಷ ವಿಧಿಸಿದ್ದಾರೆ.

ಈ ನತದೃಷ್ಟ ವಿಮಾನವನ್ನು ದುಷ್ಕರ್ಮಿಗಳು 1999ರ ಡಿಸೆಂಬರ್ 24ರಂದು ಅಪಹರಿಸಲಾಗಿತ್ತು. ಶಿಕ್ಷೆಗೊಳಗಾಗಿರುವ ಈ ಮೂವರನ್ನು ಅಪಹರಣಕಾರರಿಗೆ ತಂಗಲು ವ್ಯವಸ್ಥೆ, ಪಾಸ್‌ಪೋರ್ಟ್, ಟಿಕೇಟ್ ಮತ್ತು ಶಸ್ತ್ರಾಸ್ತ್ರ ಮದ್ದುಗುಂಡು ಒದಗಿಸಿರುವ ಆರೋಪದಲ್ಲಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ಲತೀಫ್‌ಗೆ ಮರಣದಂಡನೆ ವಿಧಿಸಬೇಕು ಎಂದು ಸಿಬಿಐ ಒತ್ತಾಯಿಸಿತ್ತು.

ಭಾರತದ ಸೆರೆಯಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದ ಅಪಹರಣಕಾರರು ವಿಮಾನವನ್ನು ಪ್ರಯಾಣಿಕರ ಸಮೇತ ವಶದಲ್ಲಿರಿಸಿಕೊಂಡು ಸ್ಫೋಟಿಸುವ ಬೆದರಿಕೆ ಹಾಕಿದ್ದರು. ಪ್ರಯಾಣಿಕರ ಸುರಕ್ಷಿತತೆಯ ದೃಷ್ಟಿಯಿಂದ ಆಗಿನ ಸರಕಾರ ಅಜರ್ ಎಂಬ ಕುಖ್ಯಾತ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಬಿಡಿಗಡೆ ಮಾಡಿತ್ತು.

ಪ್ರತಿವಾದಿಗಳ ವಕೀಲರು, ಶಿಕ್ಷೆಗೊಳಗಾಗಿರುವ ಈ ಮೂವರನ್ನು ಹರಕೆಯ ಕುರಿಯಾಗಿಸಲಾಗಿದೆ ಎಂದು ವಾದಿಸಿದರು.
ಮತ್ತಷ್ಟು
ಪ.ಬಂಗಾಲ ಬಂಧ್ ಜನ ಜೀವನ ಅಸ್ತವ್ಯಸ್ತ
ಸಂಕಲ್ಪಯಾತ್ರೆಗೆ ಹೊರಟ ಆಡ್ವಾಣಿಗೆ ಬೆದರಿಕೆ
ಸಂಸತ್ ದಾಳಿ: ಶೌಕತ್‌ಗೆ ಎರಡು ವಾರಗಳ ಗಡುವು
ಕಂದಹಾರ್ ವಿಮಾನಾಪಹರಣ: ಮೂವರಿಗೆ ಜೀವಾವಧಿ
ಪುನರ್‌ನಿರ್ಮಾಣಕ್ಕೆ ಕೈಜೋಡಿಸಲು ಪ್ರಣಬ್ ಕರೆ
ಹೊಸ ಅಣ್ವಸ್ತ್ರ ರಾಷ್ಟ್ರಗಳ ಉದಯಕ್ಕೆ ಭಾರತ ವಿರೋಧ