ಪ್ರಮುಖ ಬೆಳವಣಿಗೆಯೊಂದರಲ್ಲಿ ರಾಜ್ಯ ಪ್ರಾಯೋಜಿತ 'ಮಧು ಬಾಬು ಪಿಂಚಣಿ ಯೋಜನೆ'ಯಡಿ ಈ ತಿಂಗಳಿಂದ ಎಚ್ಐವಿ ಬಾಧಿತರಿಗೆ ಪ್ರತಿತಿಂಗಳು ಪಿಂಚಣಿ ನೀಡಲು ಒರಿಸ್ಸಾ ಸರಕಾರ ನಿರ್ಧರಿಸಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ.
ಒರಿಸ್ಸಾವು ಎಚ್ಐವಿ ಬಾಧಿತರಿಗೆ ಇಂತಹ ಅನುಕೂಲವನ್ನು ಒದಗಿಸುವಂತಹ ಪ್ರಥಮ ರಾಜ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು 6,132 ಬಾಧಿತರಿದ್ದು, ಅವರ ವಯಸ್ಸು ಮತ್ತು ಸಂಪಾದನಾ ಸ್ಥಿತಿಗಳನ್ನು ಪರಿಗಣಿಸದೆ ಪ್ರಥಮ ಹಂತದಲ್ಲಿ ಎಲ್ಲರಿಗೂ ಇದನ್ನ ಕೊಡಮಾಡಲಾಗುವುದು.
ರಾಜ್ಯದಲ್ಲಿ ದ್ರೂಮ್ ಗಂಜಾಮ್ ಜಿಲ್ಲೆಯಲ್ಲಿ ಅತ್ಯಧಿಕ ಏಡ್ಸ್ ಪೀಡಿತರಿದ್ದು, ಅಲ್ಲಿ ಗರಿಷ್ಠ ಮಂದಿ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಎಚ್ಐವಿ ಪಾಸಿಟೀವ್ ಪತ್ತೆಯಾಗಿರುವ ಪ್ರತೀಯೊಬ್ಬರು ಈ ಯೋಜನೆಯಡಿ ಮಾಸಿಕ 200 ರೂಪಾಯಿ ಪಡೆಯಲಿದ್ದಾರೆ ಎಂದು ಒರಿಸ್ಸಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕ ಪರಮೇಶ್ವರ್ ಸ್ವೇಯ್ನ್ ತಿಳಿಸಿದ್ದಾರೆ.
ಎಚ್ಐವಿ ಪೀಡಿತ ವ್ಯಕ್ತಿ ಮೃತನಾದರೆ, ಆತನ ವಿಧವಾ ಪತ್ನಿಗೆ ಆತ್ಯಾದ್ಯತೆಯ ಮೇರೆಗೆ ಪಿಂಚಣಿ ನೀಡಲೂ ಸಹ ಸರಕಾರ ನಿರ್ಧರಿಸಿದೆ.
|