ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹರ್ಷಿ ಮಹೇಶ್ ಯೋಗಿ ದೇಹತ್ಯಾಗ
ಪಾಶ್ಚಾತ್ಯರಿಗೆ ಅತೀಂದ್ರೀಯ ಧ್ಯಾನವನ್ನು ಪರಿಚರಿಯಿಸಿದ ಆಧ್ಯಾತ್ಮ ಗುರು ಮಹರ್ಷಿ ಮಹೇಶ್ ಯೋಗಿ ಅವರು ಮಂಗಳವಾರ ರಾತ್ರಿ ತನ್ನ ಡೆನ್ಮಾರ್ಕಿನ ನಿವಾಸದಲ್ಲಿ ದೇಹತ್ಯಾಗ ಮಾಡಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬೀಟಲ್ಸ್ ಗುರು ಎಂದೇ ಖ್ಯಾತರಾಗಿದ್ದ ಭಾರತದ ಯೋಗಿ, ವಿಶ್ವಾದ್ಯಂತ ಅನುಯಾಯಿಗಳನ್ನು ಹೊಂದಿದ್ದರು.ಇವರು ಅಪರಾಹ್ನ ಸುಮಾರು 7 ಗಂಟೆಯ ವೇಳೆಗೆ ಸಾವನ್ನಪ್ಪಿದರು ಎಂದು ತಿಳಿಸಿರುವ ಅವರ ಅತೀಂದ್ರೀಯ ಧ್ಯಾನ ಚಳುವಳಿ ಕೇಂದ್ರದ ವಕ್ತಾರರು, ಅವರ ಸಾವು ವಯೋಸಹಜ ನೈಸರ್ಗಿಕ ಕಾರಣಗಳಿಂದ ಸಂಭವಿಸಿದೆ ಎಂದು ತಿಳಿಸಿದ್ದಾರೆ.

1968ರಲ್ಲಿ ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು ಇವರ ಶಿಷ್ಯರಾದ ಬಳಿಕ ಮಹೇಶ್ ಯೋಗಿ ಅವರು ಬೀಟಲ್ಸ್ ಗುರು ಎಂದು ಪ್ರಖ್ಯಾತರಾದರು. ಡ್ರಗ್ಸ್ ಚಟಕ್ಕೆ ಬಲಿಯಾದ ರಾಕ್ ಗಾಯಕರಿಗೆ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಯೋಗ ಚಳುವಳಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ.

ವಿಶ್ವಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಮಹರ್ಷಿಯವರು ಕಮಲದ ಭಂಗಿಯಲ್ಲಿ ಕುಳಿತು ಗಾಳಿಯಲ್ಲಿ ತೇಲುವ ಪ್ರಕ್ರಿಯೆ ಕುರಿತಂತೆ ಹಲವಾರು ದೇಶಗಳಲ್ಲಿ ಪ್ರಚಾರ ನೀಡಿದ್ದರು.

"ಕತ್ತಲೆಯೊಂದಿಗೆ ಹೋರಾಡಬೇಡಿ. ಬೆಳಕನ್ನು ತನ್ನಿ. ಕತ್ತಲೆಯು ಮಾಯವಾಗುತ್ತದೆ" ಎಂಬುದು ಅವರ ಖ್ಯಾತ ಮಂತ್ರಗಳಲ್ಲಿ ಒಂದಾಗಿದೆ.
ಮತ್ತಷ್ಟು
ಎಚ್ಐವಿ ಪೀಡಿತರಿಗೆ ಮಾಸಾಶನ
ಐಸಿ-814 ಅಪಹರಣ: ಮೂವರಿಗೆ ಜೀವಾವಧಿ
ಪ.ಬಂಗಾಲ ಬಂಧ್ ಜನ ಜೀವನ ಅಸ್ತವ್ಯಸ್ತ
ಸಂಕಲ್ಪಯಾತ್ರೆಗೆ ಹೊರಟ ಆಡ್ವಾಣಿಗೆ ಬೆದರಿಕೆ
ಸಂಸತ್ ದಾಳಿ: ಶೌಕತ್‌ಗೆ ಎರಡು ವಾರಗಳ ಗಡುವು
ಕಂದಹಾರ್ ವಿಮಾನಾಪಹರಣ: ಮೂವರಿಗೆ ಜೀವಾವಧಿ