ಪಶ್ಚಿಮ ಬಂಗಾಳದ ದಕ್ಷಿಣ ಭಾಗದ ಕೆಲವೆಡೆ ಬುಧವಾರ ಪೂರ್ವಾಹ್ನ ಸುಮಾರು 11.40ರ ವೇಳೆ ಲಘು ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ.
ಭೂ ಕಂಪದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 4.0 ಆಗಿತ್ತು. ಸುಮಾರು 10 ರಿಂದ 15 ಸೆಕುಂಡುಗಳ ಕಾಲ ಭೂಮಿ ಕಂಪಿಸಿದ್ದು ಬೆದರಿದ ಜನತೆ ಮನೆಯಿಂದ ಹೊರಗೋಡಿ ಬಂದರು. ಭೂಕಂಪ ಸಂಭವಿಸಿರುವ ಭಾಗದ ಜನತೆ ತೀವ್ರ ಆಂತಕಕ್ಕೀಡಾಗಿದ್ದಾರೆ.
ದುರ್ಗಪುರ, ರಾಣಿಗಂಜ್, ಪಶ್ಚಿಮ ಮಿಡ್ನಾಪುರ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ. ಅದೃಷ್ಟವಶಾತ್ ಯವುದೇ ಸಾವು ನೋವುಗಳು ವರದಿಯಾಗಿಲ್ಲ.
ಘಟನೆಯಿಂದಾಗಿ ಕೆಲವು ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ. ಭೂ ಕಂಪನವು ಹಲವು ಕಟ್ಟಡಗಳಲ್ಲಿ ಬಿರುಕು ಮೂಡಿಸಿದೆ.
|