ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಸತ್ತರೆ ಕಾಂಗ್ರೆಸ‌ನ್ನು ಕ್ಷಮಿಸಬೇಡಿ : ಮಾಯಾ
ತನ್ನ ಮೇಲೆ ಈ ಹಿಂದೆ ಆಡಳಿತ ಮಾಡಿದ ಎನ್‌ಡಿಎ ಸರಕಾರವು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಮರು ತನಿಖೆಗೆ ಉದ್ದೇಶಿಸಿರುವ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ನಾನು ಸತ್ತರೆ ಕಾಂಗ್ರೆನ್ನು ಕ್ಷಮಿಸಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಕಳೆದ ಬಾರಿ ಆಡಳಿತ ಮಾಡಿದ ಎನ್‌ಡಿಎ ಸರಕಾರವು ಸೂಕ್ತವಾಗಿ ಹಂಚಿಕೆಯಾಗದ ಆಸ್ತಿ ಪ್ರಕರಣವಾದ ತಾಜ್ ಕಾರಿಡಾರ್ ಕೇಸಿನಲ್ಲಿ ನನ್ನನ್ನು ಸಿಲುಕಿಸಿದ್ದಾರೆ. ಈಗ ಅದೇ ಹಾದಿಯನ್ನೇ ಕಾಂಗ್ರೆಸ್ ಹಿಡಿದಿದ್ದು, ಪ್ರಕರಣವನ್ನು ಮರು ತನಿಖೆ ಮಾಡಿ ನನ್ನನ್ನು ಜೈಲಿಗೆ ಹಾಕಲು ಪ್ರಯತ್ನ ಪಡುತ್ತಿದೆ ಎಂದು ಮಾಯಾವತಿ ಬಿ‌ಎಸ್‌ಪಿ ಪಕ್ಷವು ಏರ್ಪಡಿಸಿದ್ದ ಪ್ರಚಾರ ಸಭೆಯೊಂದರಲ್ಲಿ ಕುಟುಕಿದ್ದಾರೆ.

ನಾನು ಆದಾಯ ತೆರಿಗೆ ಅಧಿಕಾರಿಗಳಿಂದ ಮುಕ್ತಿ ಪಡೆದಿದ್ದೇನೆ. ಆದರೂ ಕಾಂಗ್ರೆಸ್, ಮಾಧ್ಯಮಗಳ ಮೂಲಕ ಅಪೂರ್ಣ ಮಾಯಿತಿಯನ್ನು ನೀಡಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನ ಪಡುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಇದರಲ್ಲಿ ಯಶಸ್ವಿಯಾಗಿ ನನ್ನನ್ನು ಜೈಲಿಗಟ್ಟಿದರೆ ಬಿಎಸ್‌ಪಿ ಮೇಲಕ್ಕೇರುತ್ತದೆ ಹೊರತು ಮುಳುಗುವುದಿಲ್ಲ ಎಂದು ಸವಾಲು ಹಾಕಿದರು.

ಬಿಎಸ್‌ಪಿ ಗಳಿಸುತ್ತಿರುವ ಜನಪ್ರಿಯತೆಯನ್ನು ಸಹಿಸಲಾಗದ ಕಾಂಗ್ರೇಸ್ ನನಗೆ ಬೆದದರಿಕೆ ಹಾಕುತ್ತಿದೆ. ಇದರಿಂದಾಗಿ ನನಗೆ ಜೀವದ ಬೆದರಿಕೆಯೂ ಉಂಟಾಗಿದೆ. ಈ ಕಾರಣಕ್ಕಾಗಿ ಹೆಚ್ಚಿನ ಭದ್ರತೆಯ ನಿಟ್ಟಿನಲ್ಲಿ ಸ್ಪೆಷಲ್ ಪ್ರೋಟೆಕ್ಷನ್ ಗ್ರೂಫ್ (ಎಸ್‌ಜಿಪಿ) ರಕ್ಷಣೆಗೆ ಕೇಂದ್ರ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೆ. ಆದರೆ ಇದನ್ನು ಪರಿಗಣಿಸದ ಕೇಂದ್ರ ಸರಕಾರವು ನನ್ನ ಜೀವದ ಜೊತೆ ಆಡುತ್ತಿದೆ. ಇದರಿಂದಾಗಿ ನಾನೆಲ್ಲಿಯಾದರೂ ಸತ್ತರೆ ಕಾಂಗ್ರೆಸನ್ನು ಕ್ಷಮಿಸಬೇಡಿ, ಪ್ರತಿಕಾರ ತೀರಿಸಿ ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು
ಮತ್ತಷ್ಟು
ಖಾಸಗಿ ಉದ್ಯೋಗ ಮೀಸಲು ಶಾಸನ: ಮಾಯಾ ಒತ್ತಾಯ
ಪ.ಬಂಗಾಳದಲ್ಲಿ ಲಘು ಕಂಪನ
ಮಹರ್ಷಿ ಮಹೇಶ್ ಯೋಗಿ ದೇಹತ್ಯಾಗ
ಎಚ್ಐವಿ ಪೀಡಿತರಿಗೆ ಮಾಸಾಶನ
ಐಸಿ-814 ಅಪಹರಣ: ಮೂವರಿಗೆ ಜೀವಾವಧಿ
ಪ.ಬಂಗಾಲ ಬಂಧ್ ಜನ ಜೀವನ ಅಸ್ತವ್ಯಸ್ತ