ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮಿತಾಬ್ ವಿರುದ್ಧ ಆಕ್ರಮಣ ಶುದ್ಧ ಅವಿವೇಕಿತನ
ಬಿಗ್ ಬಿ ಸಹಾಯಕ್ಕೆ ಧಾವಿಸಿದ ಹಿರಿಯ ಠಾಕ್ರೆ
ಅಮಿತಾಬಾ ಬಚ್ಚನ್ ಸಹಾಯಕ್ಕೆ ಧಾವಿಸಿರುವ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ, ಅಮಿತಾಬ್ ಮತ್ತು ಉತ್ತರ ಭಾರತೀಯರ ವಿರುದ್ಧ, ತನ್ನ ಆಳಿಯ ಹಾಗೂ ಸೇನಾ ನಾಯಕ ರಾಜ್ ಠಾಕ್ರೆ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಶುದ್ಧ ಅವಿವೇಕಿತನ ಎಂದು ಜರೆದಿದ್ದಾರೆ.

ಅಮಿತಾಬಚ್ಚನ್ ಯಾವಾಗಲೂ ಮಹಾರಾಷ್ಚ್ರಕ್ಕಿಂತ ಉತ್ತರ ಭಾರತದವರಿಗೆ ಆದ್ಯತೆ ನೀಡುತ್ತಾರೆ ಎಂಬುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ನೀಡಿದ್ದ ವೈಯಕ್ತಿಕ ಹೇಳಿಕೆಯು ಮೂರ್ಖತನವಲ್ಲದೆ ಬೇರೇನಲ್ಲ ಎಂದು ಬಾಳಾಠಾಕ್ರೆ ಹೇಳಿದ್ದಾರೆ.

"ಅಮಿತಾಬ್ ಬಚ್ಚನ್ ಅಮಿತಾಬ್ ಬಚ್ಚನೇ....... ಅವರು ಇಂತಹ ಆಪಾದನೆಗಳನ್ನು ನಿರ್ಲಕ್ಷ್ಯಿಸಬೇಕು" ಎಂದು ಠಾಕ್ರೆ ತನ್ನ ಹೇಳಿಕೆಯೊಂದರಲ್ಲಿ ಅಭಿಪ್ರಾಯಿಸಿದ್ದಾರೆ. ಅಮಿತಾಬ್ ಒಬ್ಬ ಕುಟುಂಬ ಸ್ನೇಹಿತ. 40 ವರ್ಷದಿಂದ ಈ ಸ್ನೇಹ ಸಂಬಂಧವನ್ನು ಹೊಂದಿರುವುದಾಗಿ ಹೇಳಿರುವ ಠಾಕ್ರೆ, ಇದು ಈ ಅವಧಿಯಲ್ಲಿ ಕಳೆಗುಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಮಿತಾಬ್ ಒಬ್ಬ ಜಾಗತಿಕ ಮಿನುಗುತಾರೆ. ಅವರನ್ನು ಜಗತ್ತಿನಾದ್ಯಂತ ಗೌರವಿಸಲಾಗುತ್ತದೆ. ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿರುವುದಕ್ಕೆ ಮುಂಬಯಿ ಮತ್ತು ಜನತೆಗೆ ಅವರು ಯಾವತ್ತೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಾ ಠಾಕ್ರೆ, ಅಮಿತಾಬ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂಬಯಿಯಲ್ಲಿ ವಾಸಿಸುತ್ತಿರುವ ಉತ್ತರ ಭಾರತೀಯರ ವಿರುದ್ಧ ತನ್ನ ವಿರೋಧವನ್ನು ಸೂಚಿಸಿದ್ದ ರಾಜ್ ಠಾಕ್ರೆ, ಬಿಗ್ ಬಿಯ ಮೇಲೆ ವಾಗ್ಧಾಳಿ ನಡೆಸಿದ್ದರು. ಮಹಾರಾಷ್ಟ್ರದ ನಿವಾಸಿಯಾಗಿದ್ದು, ಅವರು ಮಹಾರಾಷ್ಟ್ರಕ್ಕಾಗಿ ಏನೂ ಮಾಡುತ್ತಿಲ್ಲ ಎಂದು ಟೀಕಿಸಿದ್ದರಲ್ಲದೆ, ಅಮಿತಾಬ್ ನಿಷ್ಠೆ ಏನಿದ್ದರೂ ಮಹಾರಾಷ್ಟ್ರಕ್ಕಿಂತ ತನ್ನ ತವರು ನೆಲ ಉತ್ತರ ಪ್ರದೇಶಕ್ಕೆ ಆಗಿದೆ ಎಂದೂ ಅವರು ಆಪಾದಿಸಿದ್ದರು.
ಮತ್ತಷ್ಟು
ನಾನು ಸತ್ತರೆ ಕಾಂಗ್ರೆಸ‌ನ್ನು ಕ್ಷಮಿಸಬೇಡಿ : ಮಾಯಾ
ಖಾಸಗಿ ಉದ್ಯೋಗ ಮೀಸಲು ಶಾಸನ: ಮಾಯಾ ಒತ್ತಾಯ
ಪ.ಬಂಗಾಳದಲ್ಲಿ ಲಘು ಕಂಪನ
ಮಹರ್ಷಿ ಮಹೇಶ್ ಯೋಗಿ ದೇಹತ್ಯಾಗ
ಎಚ್ಐವಿ ಪೀಡಿತರಿಗೆ ಮಾಸಾಶನ
ಐಸಿ-814 ಅಪಹರಣ: ಮೂವರಿಗೆ ಜೀವಾವಧಿ