ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಸಿರು ತಂತ್ರಜ್ಞಾನ ಉತ್ತೇಜನಕ್ಕೆ ನಿಧಿ: ಪ್ರಧಾನಿ
ಹಸಿರು ತಂತ್ರಜ್ಞಾನಗಳ ಉತ್ತೇಜನಕ್ಕಾಗಿ ಉದ್ದಿಮೆ ಬಂಡವಾಳ ನಿಧಿಯೊಂದನ್ನು ಸ್ಥಾಪಿಸಲು ಸರಕಾರ ಪರಿಗಣಿಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಹೇಳಿದ್ದಾರೆ.

ದೆಹಲಿ ಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮುಂಬರುವ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುವ ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು ಜಾಗತಿಕ ತಾಪಮಾನಗಳ ಸವಾಲುಗಳನ್ನು ಬಗೆಹರಿಸುತ್ತದೆ ಎಂದು ನುಡಿದರು.

"ಹವಾಮಾನ ಬದಲಾವಣೆ ಕುರಿತ ಪ್ರಧಾನ ಮಂತ್ರಿಗಳ ಮಂಡಳಿಯು ಹವಾಮಾನ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯ ಕಾರ್ಯನಿರ್ವಹಿಸುತ್ತದೆ. ಹವಾಮಾನ ಬದಲಾವಣೆ ನಿಭಾಯಿಸುವ ಜಾಗತಿಕ ಕಾರ್ಯತಂತ್ರ ಸೃಷ್ಟಿಗೆ ನಾವು ಅಂತಾರಾಷ್ಟ್ರೀಯವಾಗಿ ಕಾರ್ಯನಿರತವಾಗಿದ್ದರೂ, ಹವಾಮಾನ ಬದಲಾವಣೆ ಕುರಿತ ಸವಾಲುಗಳನ್ನು ಎದುರಿಸಲು ಸ್ಥಳೀಯ, ಉಪ ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಾರ್ಯಯೋಜನೆಗೆ ಸಮಾನಾಂತರವಾಗಿ ಕೆಲಸ ಮಾಡಬೇಕು" ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆ ರೂಪದಲ್ಲಿ ಬಿಂಬಿತವಾದ ಪರಿಸರಬಿಕ್ಕಟ್ಟು, ಸಮಾನ ವಿಪತ್ತಿಗೆ ಈಡಾಗಿರುವ ಬಗ್ಗೆ ಜನರಿಗೆ ಅರಿವಾಗಿದೆ. ಇದೊಂದು ಸಂಗ್ರಹಿತ ಬಿಕ್ಕಟ್ಟಾಗಿದ್ದು, ಊಹಾತ್ಮಕವಾಗಿ ನಿಭಾಯಿಸಿದಲ್ಲಿ ನೈಸರ್ಗಿಕ ಶಕ್ತಿಗಳನ್ನು ಮಾನವ ಒಗ್ಗಟ್ಟಿನಿಂದ ಎದುರಿಸುವ ಸಾಮೂಹಿಕ ಅವಕಾಶ ಒದಗಿಸುತ್ತದೆ. ಆದ್ದರಿಂದ ನಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ನುಡಿದರು.

ಶೃಂಗಸಭೆಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮಮೂನ್ ಅಬ್ದುಲ್ ಗಯೂಂ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು.

ವಾತಾವರಣ ಬದಲಾವಣೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯು ಮುಂಬರುವ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನುಡಿದ ಅವರು, ಸಾರ್ವಜನಿಕ ಸಾರಿಗೆಗೆ ತಕ್ಷಣ ಗಮನ ಹರಿಸುವ ಅಗತ್ಯವಿದೆ ಮತ್ತು ಈ ಕುರಿತಂತೆ ಸಮಗ್ರ ನೀತಿಯೊಂದನ್ನು ರೂಪಿಸಲು ಯೋಜನಾ ಆಯೋಗವನ್ನು ಸರಕಾರ ಕೇಳಿಕೊಂಡಿದೆ ಎಂದು ತಿಳಿಸಿದರು.
ಮತ್ತಷ್ಟು
ಅಮಿತಾಬ್ ವಿರುದ್ಧ ಆಕ್ರಮಣ ಶುದ್ಧ ಅವಿವೇಕಿತನ
ನಾನು ಸತ್ತರೆ ಕಾಂಗ್ರೆಸ‌ನ್ನು ಕ್ಷಮಿಸಬೇಡಿ : ಮಾಯಾ
ಖಾಸಗಿ ಉದ್ಯೋಗ ಮೀಸಲು ಶಾಸನ: ಮಾಯಾ ಒತ್ತಾಯ
ಪ.ಬಂಗಾಳದಲ್ಲಿ ಲಘು ಕಂಪನ
ಮಹರ್ಷಿ ಮಹೇಶ್ ಯೋಗಿ ದೇಹತ್ಯಾಗ
ಎಚ್ಐವಿ ಪೀಡಿತರಿಗೆ ಮಾಸಾಶನ