ಸುಪ್ರಸಿದ್ಧ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸುವ ಕುರಿತು ತಾನು ಒಲವು ಹೊಂದಿರುವುದಾಗಿ ಕೇರಳ ಸರಕಾರ ಸುಪ್ರೀಂ ಕೋರ್ಟಿಗೆ ಗುರವಾರ ಹೇಳಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೂಜಾ ಕೇಂದ್ರದ ಅಧಿಕಾರಿಗಳು ಇನ್ನಷ್ಟೆ ತಮ್ಮ ಉತ್ತರವನ್ನು ಸಲ್ಲಿಸಬೇಕಾಗಿದೆ. ಈ ಹಿಂದೆ ದೇವಸ್ಥಾನಂ ಮಂಡಳಿಯು, 10ರಿಂದ 50ರೊಳಗಿನ ಮಳೆಯರು ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿತ್ತು.
ಕಳೆದ ವರ್ಷ ಸಿನಿಮಾ ನಟಿ ಜಯಮಾಲ ತಾನು ದೇವಾಲಯದೊಳಕ್ಕೆ ಪ್ರವೇಶಿಸಿದ್ದೆ ಎಂಬುದಾಗಿ ನೀಡಿದ್ದ ಹೇಳಿಕೆ ಅತಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದು, ನಾನಾ ತಿರುವುಗಳನ್ನ ಪಡೆದಿತ್ತು.
ಜಯಮಾಲಾರ ಹೇಳಿಕೆಯಿಂದಾಗಿ ದೇವಾಲಯದ ಅಧಿಕಾರಿಗಳು ದೇವಾಲಯದ ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸಲು ಮುಂದಾಗಿದ್ದರು.
|