ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಡ್ನಿ ಹಗರಣ ಜಾಲದ ರೂವಾರಿ ಡಾ. ಅಮಿತ್ ಬಂಧನ
ಭಾರತವನ್ನು ತಲ್ಲಣಗೊಳಿಸಿದ ಕಿಡ್ನಿ ಹಗರಣ ಜಾಲದ ತಂಡದ ನಾಯಕನಾಗಿದ್ದು, ತಲೆಮರೆಸಿಕೊಂಡಿದ್ದ, ಮುಖ್ಯಆರೋಪಿ ಡಾ. ಅಮಿತ್ ಕುಮಾರ್‌‌ನನ್ನು ನೇಪಾಳದಲ್ಲಿ ಬಂಧಿಸಲಾಗಿದೆ.

ಮೂತ್ರಪಿಂಡ ಹಗರಣದಲ್ಲಿ ಅಮಿತ್ ಕುಮಾರ್ ಮುಖ್ಯ ಆರೋಪಿಯಾಗಿದ್ದು, ಪೊಲೀಸರು ಈ ಹಗರಣವನ್ನು ಭೇಧಿಸಿದ ಕ್ಷಣದಿಂದ ಪರಾರಿಯಾಗಿದ್ದರು. ಪೊಲೀಸ್ ಪಡೆ ತಕ್ಷಣ ಅಮಿತ್‌ ಕುಮಾರ್‍ಗಾಗಿ ಬಲೆ ಬೀಸಿದ್ದರು. ಇದೀಗ ಅವರನ್ನು ನೇಪಾಳದ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ನೇಪಾಳದ ರಾಜಧಾನಿ ಕಾಠ್ಮಂಡುವಿನಿಂದ ಸುಮಾರು ಐದು ಗಂಟೆ ಪ್ರಯಾಣದ ಹಾದಿಯಷ್ಟು ದೂರದಲ್ಲಿನ ಹೊಟೇಲಿನಲ್ಲಿ ಅಮಿತ್ ಕುಮಾರ್ ಇರುವುದನ್ನು ಪತ್ತೆ ಹಚ್ಚಿದ ನೇಪಾಳಿ ಪೊಲೀಸರು, ಆತನನ್ನು ಗುರುವಾರ ಸಂಜೆ ಸುಮಾರು 5 ಗಂಟೆಯ ಹೊತ್ತಿನಲ್ಲಿ ಬಂಧಿಸಲು ಸಫಲರಾಗಿದ್ದಾರೆ ಎಂದು ನೇಪಾಳಿ ಪೊಲೀಸ್ ಮೂಲಗಳು ತಿಳಿಸಿವೆ.

ನೇಪಾಳದ ಗೃಹ ಸಚಿವರಾಗಿರುವ ರಾಮ್ ಕುಮಾರ್ ಚೌಧರಿ, ಅಮಿತ್ ಕುಮಾರ್‌ನ ಬಂಧನವನ್ನು ಸ್ಪಷ್ಟಪಡಿಸಿದ್ದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ಮಾಧ್ಯಮಗಳು, ಇಂಟರ್ ಫೋಲ್ ಮತ್ತು ನೇಪಾಳಿ ಪೋಲೀಸರು ಶ್ರಮವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ವಾನ್‌‌ನ ಡಿಐಜಿ ಯು ಅಮಿತ್‌ನ ಬಂಧನವನ್ನು ದೃಢೀಕರಿಸಿದ್ದು, ಶೀಘ್ರದಲ್ಲಿ ಅಮಿತ್‌ರನ್ನು ಭಾರತೀಯ ಪೊಲೀಸರ ಸುರ್ಪದಿಗೆ ನೀಡಲಾಗುವುದು ಎಂದು ಹೇಳಿದರು.

ಈ ಚಾಲಾಕಿ ಆರೋಪಿಯನ್ನು ಹಿಡಿದ ಪೊಲೀಸರು ಆತನಿಂದ ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 9 ಲಕ್ಷ ಯೂರೋ, 1 ಲಕ್ಷ ಡಾಲರ್ ಮತ್ತು 40- ಸಾವಿರ ನೇಪಾಳಿ ಕರೆನ್ಸಿ ಸೇರಿದ.

ಭಾರತದ ಗೃಹ ಸಚಿವಾಲಯದ ರಾಜ್ಯ ಸಚಿವರಾದ ಶ್ರೀಪ್ರಕಾಶ್ ಜೈಸ್ವಾಲ್, ಅಮಿತ್‌ನ ಬಂಧನವನ್ನು ಸ್ಪಷ್ಟೀಕರಿಸಿದ್ದು, ತಕ್ಷಣದಲ್ಲೇ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಮೂಲಕ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಮತ್ತಷ್ಟು
'ಸೆಕ್ಸ್ ವೈದ್ಯ'ನಿಗೆ ಜೀವಾವಧಿ ಶಿಕ್ಷೆ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸರಕಾರ ಒಲವು
ಸಿಮಿ ಮೇಲಿನ ನಿಷೇಧ ವಿಸ್ತರಣೆ
ಹಸಿರು ತಂತ್ರಜ್ಞಾನ ಉತ್ತೇಜನಕ್ಕೆ ನಿಧಿ: ಪ್ರಧಾನಿ
ಅಮಿತಾಬ್ ವಿರುದ್ಧ ಆಕ್ರಮಣ ಶುದ್ಧ ಅವಿವೇಕಿತನ
ನಾನು ಸತ್ತರೆ ಕಾಂಗ್ರೆಸ‌ನ್ನು ಕ್ಷಮಿಸಬೇಡಿ : ಮಾಯಾ