ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಕೆಳಮುಂಡಾ ಎಂಬಲ್ಲಿನ ಗುಲಬ್ಬಗ್ ಎಂಬಲ್ಲಿ ವಸತಿಗಳ ಸಮುಚ್ಚಯವೊಂದರ ಮೇಲಿನ ಹಿಮಪಾತದಿಂದಾಗಿ ಕನಿಷ್ಠ 30 ಮಂದಿ ಸಾವನ್ನಪ್ಪಿರುವುದಾಗಿ ಭಯಪಡಲಾಗಿದೆ.
ಈ ದುರಂತದ ಕುರಿತಂತೆ ಸ್ಥಳೀಯರು ಮಾಹಿತಿ ನೀಡಿದ್ದು, ಬಳಿಕ ಸೇನೆ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಕೈಗೊಂಡಿದ್ದು ಇದುವರೆಗೆ, ಇಬ್ಬರು ಗಂಡಸರು ಮತ್ತು 12ರ ಹರೆಯದ ಬಾಲಕಿ ಸೇರಿದಂತೆ ಮೂರು ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಮೂಲಗಳು ಹೇಳಿವೆ. ಇವರಲ್ಲಿಬ್ಬರು ಗುಜ್ಜಾರ್‌ಪಟ್ಟಿಯ ಶಬಿನ ಮತ್ತು ಮೊಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ.
ಗುಲಬ್ಬಗ್‌ನಲ್ಲಿ ಸಂಭವಿಸುತ್ತಿರುವ ಪ್ರಥಮ ಹಿಮಪಾತ ಇದಾಗಿದೆ. 2005ರ ಇದೇ ದಿನದಂದು ಅನಂತನಾಗ್ ಸಮೀಪ ಅಪ್ಪಳಿಸಿದ್ದ ಶೀತ ಮಾರುತ 200ಕ್ಕಿಂತಲೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿತ್ತು.
|