ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಮುಖಂಡನ ಥಳಿಸಿ ಕೊಲೆ
ಶಿವಸೇನಾ ನಾಯಕನೊಬ್ಬನ ಕೊಲೆಯಲ್ಲಿ ಪಾಲ್ಗೊಂಡ ಆರೋಪ ಹೊತ್ತಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ನಡೆದ ರಾಜಕೀಯ ಸಭೆಯಲ್ಲಿ ಥಳಿಸಿ ಕೊಂದಿರುವ ಘಟನೆ ಸಂಭವಿಸಿದೆ.

ಜಿಲ್ಲಾಮಂಡಳಿಯ ಉಪಚುನಾವಣೆಯ ಮುಂಚಿತವಾಗಿ ನಡೆದ ಸಭೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ನಾಗಪುರ ಜಿಲ್ಲಾ ಮಂಡಳಿಯ ಮಾಜಿ ಉಪಾಧ್ಯಕ್ಷ ಧ್ಯಾನೇಶ್ವರ್ ಸಾಥ್ವಾನೆ ಅವರನ್ನು ತಾರ್ಸಾ ಗ್ರಾಮದಲ್ಲಿ ಹತ್ಯೆ ಮಾಡಲಾಗಿದೆ.

ಲೋಕೋಪಯೋಗಿ ಸಚಿವ ಅನಿಲ್ ದೇಶ್‌ಮುಖ್ ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಕಳೆದ ರಾತ್ರಿ ಈ ಕೊಲೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಸೇನಾ ಕಾರ್ಯಕರ್ತರೆಂದು ಹೇಳಲಾಗಿರುವ ವ್ಯಕ್ತಿಗಳನ್ನೊಳಗೊಂಡಿದ್ದ ದೊಡ್ಡ ಗುಂಪೊಂದು ಸಭೆಗೆ ಅಡ್ಡಿಪಡಿಸಿದ್ದು, ಸಚಿವರ ಕಾರಿಗೆ ಕಲ್ಲುತೂರಿತ್ತು. ಸ್ಥಳದಲ್ಲಿದ್ದ ಕೆಲವೇ ಸಂಖ್ಯೆಯ ಪೊಲೀಸರು ಅಸಹಾಯಕರಾಗಿ ಈ ಘಟನೆಯನ್ನು ವೀಕ್ಷಿಸಬೇಕಾಯಿತು ಎಂದು ವರದಿ ತಿಳಿಸಿದೆ.

ದೇಶ್‌ಮುಖ್ ಅವರು ಜಾಗಬಿಡುತ್ತಿದ್ದಂತೆಯೇ ಸಾತ್ವಾನೆಯನ್ನು ಸುತ್ತುವರಿದ ಗುಂಪು ಅವರನ್ನು ಹಿಡಿದು ಜಗ್ಗಾಡಿ ವಸ್ತ್ರಗಳನ್ನು ಕಿತ್ತೆಸೆದು, ದೊಣ್ಣೆಯಿಂದ ನಿರ್ದಯವಾಗಿ ಬಡಿದುಹಾಕಿತು. ಅವರನ್ನು ನಾಗ್‌ಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಅವರು ಮೃತರಾದರು.

ಮೃತ ಸಾಥ್ವಾನೆ, ಆರು ತಿಂಗಳ ಹಿಂದೆ ನಡೆದಿದ್ದ ಶಿವ ಸೇನಾ ಜಿಲ್ಲಾ ಮಂಡಳಿ ಸದಸ್ಯ ಗೋಪಾಲ್ ಲೋಹ್‍‌ಬಾರೆ ಕೊಲೆಯಲ್ಲಿ ಭಾಗಿಯಾಗಿದ್ದರೆಂದು ಆಪಾದಿಸಲಾಗಿತ್ತು.
ಮತ್ತಷ್ಟು
ರಾಜ್‌ ವಿರುದ್ಧ ಅರ್ಜಿ ವಿಚಾರಣೆ ಫೆ.22ಕ್ಕೆ
ಕಾಶ್ಮೀರ: ಹಿಮಪಾತಕ್ಕೆ ಕನಿಷ್ಠ 30 ಬಲಿ
ಕಿಡ್ನಿ ವೈದ್ಯ ಅಮಿತ್‌ನಿಂದ ತಪ್ಪೊಪ್ಪಿಗೆ
ಕಿಡ್ನಿ ಹಗರಣ ಜಾಲದ ರೂವಾರಿ ಡಾ. ಅಮಿತ್ ಬಂಧನ
'ಸೆಕ್ಸ್ ವೈದ್ಯ'ನಿಗೆ ಜೀವಾವಧಿ ಶಿಕ್ಷೆ
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸರಕಾರ ಒಲವು