ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೊಮ್ಮೆ ಭಾರತಕ್ಕೆ ಅಣುಒಪ್ಪಂದ ಅವಕಾಶ ಲಭಿಸದು: ಮುಲ್‌ಫೋರ್ಡ್
ನಾಗರಿಕ ಅಣು ಒಪ್ಪಂದವನ್ನು ತ್ವರಿತಗೊಳಿಸಲು ನವದೆಹಲಿಯ ಮೇಲೆ ಒತ್ತಡ ಹೆಚ್ಚಿಸಿರುವ ಅಮೆರಿಕ ರಾಯಭಾರಿ ಡೇವಿಡ್ ಮುಲ್‌ಫೋರ್ಡ್, ಇಂತಹ ಒಪ್ಪಂದವನ್ನು ಮುಂದಿನ ಸರಕಾರ ಮತ್ತೊಮ್ಮೆ ನವೀಕರಿಸುವುದು ಅಥವಾ ಪ್ರಸ್ತಾಪಿಸುವುದು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ ಕಾಂಗ್ರೆಸ್‌ನಲ್ಲಿ ಈ ಪ್ರಕ್ರಿಯೆ ನಡೆಯದೇ ಇದ್ದಲ್ಲಿ, ಈ ಒಪ್ಪಂದವನ್ನು ಭಾರತದೊಂದಿಗೆ ಮತ್ತೆ ಪ್ರಸ್ತಾಪಿಸುವುದು ಅನುಮಾನಕರ ಎಂದು ಅವರು ಹೇಳಿದ್ದಾರೆ. ನಿಶ್ಚಿತವಾಗಿಯೂ ಇದನ್ನು ಡೆಮಾಕ್ರೆಟಿಕ್ ಅಥವಾ ರಿಪಬ್ಲಿಕನ್ ಯಾವುದೇ ಆಡಳಿತವೂ 2010ರೊಳಗಾಗಿ ಪರಾಮರ್ಷಿಸದು. ಅಷ್ಟರಲ್ಲಿ ಭಾರತದಲ್ಲಿ ಈಗಿರುವ ಆಡಳಿತಾವಧಿ ಮುಗಿದಿರುತ್ತದೆ ಎಂದು ಮುಲ್‌ಫೋರ್ಡ್ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಅಣ್ವಸ್ತ್ರ ಪ್ರಸರಣ ತಡೆ ಪಂಗಡಗಳು, ಭವಿಷ್ಯದಲ್ಲಿ ನೀತಿ ನಿಯಮಗಳ ಬದಲಾವಣೆಗೆ ಮತ್ತು ಹೆಚ್ಚುವರಿ ಷರತ್ತುಗಳನ್ನು ಸೇರಿಸಲು ಒತ್ತಾಯಿಸಬಹುದು, ಈ ಹಿನ್ನೆಲೆಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸಲು ಇದು ಸೂಕ್ತಕಾಲ ಎಂದು ಅವರು ಎಚ್ಚರಿಸಿದರು.
ಮತ್ತಷ್ಟು
ಬಾಬಾ ಅಮ್ಟೆ ಅಸ್ತಂಗತ
ಅರುಣಾಚಲ: ಪ್ರಧಾನಿ ಹೇಳಿಕೆಗೆ ಚೀನ ಆಕ್ಷೇಪ
ವೀಸಾ ವಿಸ್ತರಣೆ ಆಶಾವಾದದಲ್ಲಿ ತಸ್ಲಿಮಾ
ಕಾಂಗ್ರೆಸ್ ಮುಖಂಡನ ಥಳಿಸಿ ಕೊಲೆ
ರಾಜ್‌ ವಿರುದ್ಧ ಅರ್ಜಿ ವಿಚಾರಣೆ ಫೆ.22ಕ್ಕೆ
ಕಾಶ್ಮೀರ: ಹಿಮಪಾತಕ್ಕೆ ಕನಿಷ್ಠ 30 ಬಲಿ