ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಲಿನಿಕ್‌ಗಳ ನಿಯಂತ್ರಣಕ್ಕೆ ಸದ್ಯವೇ ಶಾಸನ
ದೇಶಾದ್ಯಂತ ಕಾನೂನು ಬಾಹಿರ ಕ್ಲಿನಿಕ್‌ಗಳು ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ, ಖಾಸಗೀ ಮತ್ತು ಸಾರ್ವಜನಿಕ ಕ್ಲಿನಿಕ್‌ಗಳನ್ನು ನಿಯಂತ್ರಿಸಲು ಸದ್ಯವೇ ಶಾಸನವೊಂದನ್ನು ತರಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.

ಚಿಕಿತ್ಸಾಲಯಗಳ ಸ್ಥಾಪನೆ ಕಾಯ್ದೆಯು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದಿದ್ದು, ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂಬುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಅನ್ಬುಮಣಿ ರಾಮದಾಸ್ ಶನಿವಾರ ಹೇಳಿದ್ದಾರೆ.

ಈ ಹೊಸ ಕಾಯ್ದೆಯ ಪ್ರಕಾರ ಎಲ್ಲ ಸಾರ್ವಜನಿಕ ಮತ್ತು ಖಾಸಗೀ ದವಾಖಾನೆಗಳು ತಾವಾಗಿಯೇ ನೋಂದಾವಣೆ ಮಾಡಿಕೊಳ್ಳಬೇಕಾಗಿದೆ. ಇದರಿಂದಾಗಿ ರಾಷ್ಟ್ರಾದ್ಯಂತವಿರುವ ಎಲ್ಲ ಕ್ಲಿನಿಕ್‌ಗಳು ತಮ್ಮ ಗುಣಮಟ್ಟ ಮತ್ತು ಉತ್ಕೃಷ್ಟತೆಯನ್ನು ಹೆಚ್ಚಿಸಿಕೊಳ್ಳುತ್ತವೆ ಎಂದು ಸಚಿವ ರಾಮ್‌ದಾಸ್ ಅಭಿಪ್ರಾಯಿಸಿದ್ದಾರೆ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಡಯಾಗ್ನಾಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸಚಿವರು ಸಚಿವಾಲಯವು ಗುಣಮಟ್ಟದ ಮತ್ತು ಆರೋಗ್ಯ ಸಂಬಂಧೀ ಸೇವೆಗಳನ್ನು ಕೇಂದ್ರ ಸರಕಾರ ಆರೋಗ್ಯ ಸ್ಕೀಮಿನ ಫಲಾನುಭವಿಗಳಿಗೆ ಒದಗಸಲು ಇಚ್ಛಿಸಿದೆ ಎಂದು ತಿಳಿಸಿದರು.
ಮತ್ತಷ್ಟು
ನೇಪಾಳದಿಂದ ಕಿಡ್ನಿವೈದ್ಯನ ಹಸ್ತಾಂತರ
ಮೊಹಾಲಿ ಕ್ರೀಡಾಂಗಣದಲ್ಲಿ ಅಗ್ನಿದುರಂತ
ಮತ್ತೊಮ್ಮೆ ಭಾರತಕ್ಕೆ ಅಣುಒಪ್ಪಂದ ಅವಕಾಶ ಲಭಿಸದು: ಮುಲ್‌ಫೋರ್ಡ್
ಬಾಬಾ ಅಮ್ಟೆ ಅಸ್ತಂಗತ
ಅರುಣಾಚಲ: ಪ್ರಧಾನಿ ಹೇಳಿಕೆಗೆ ಚೀನ ಆಕ್ಷೇಪ
ವೀಸಾ ವಿಸ್ತರಣೆ ಆಶಾವಾದದಲ್ಲಿ ತಸ್ಲಿಮಾ