ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಜಯ್‌‌ನನ್ನು ವಿವಾಹವಾಗಿದ್ದೇನೆ: ಮಾನ್ಯತಾ
ದೀರ್ಘಕಾಲದ ಗೆಳೆಯ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಮದುವೆಯಾಗಿರುವುದಾಗಿ ಕೊನೆಗೂ ಮಾನ್ಯತಾ ಒಪ್ಪಿಕೊಂಡಿರುವುದರೊಂದಿಗೆ ಈ ಕುರಿತ ಊಹಾಪೋಹಗಳಿಗೆ ಅಧಿಕೃತ ಮುದ್ರೆ ಬಿದ್ದಿದೆ.

ತಾವು ಮದುವೆಯಾಗಿರುವ ವಿಷಯವನ್ನು ಈ ಮೊದಲು ಸಂಜಯ್ ದತ್ ನಿರಾಕರಿಸಿದ್ದರು. ಆದರೆ, ಕಳೆದ ತಿಂಗಳು ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ 82ನೇ ಜನ್ಮದಿನದಂದು ಸಂಜಯ್-ಮಾನ್ಯತಾ ಭಾವಚಿತ್ರದೊಂದಿಗೆ ಠಾಕ್ರೆಗೆ ಶುಭಾಶಯ ಕೋರುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರೊಂದಿಗೆ ಈ ಬಗೆಗಿನ ಕುತೂಹಲ ಹೆಚ್ಚಿತ್ತು.

ಕುಟುಂಬ ಸದಸ್ಯರು ಹಾಗೂ ಅತ್ಯಂತ ಆತ್ಮೀಯರ ಉಪಸ್ಥಿತಿಯಲ್ಲಿ ನಡೆದ ಪುಟ್ಟ ಸಮಾರಂಭವೊಂದರಲ್ಲಿ ಅವರಿಬ್ಬರೂ ಮದುವೆಯಾಗಿದ್ದರು ಎಂದು ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು. ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ನಟಿಸುತ್ತಿದ್ದ ಮಾನ್ಯತಾ ಅಲಿಯಾಸ್ ಶೆಹನಾಜ್ ಶೇಖ್‌ರನ್ನು ಮದುವೆಯಾಗಲು ದತ್ ಯಾವತ್ತೂ ಹಂಬಲಿಸುತ್ತಿದ್ದರು.

ಇದೀಗ ಸಂಜಯ್ ಅವರ ಏಳುಬೀಳುಗಳ ಸಮಯದಲ್ಲಿ ಅವರ ಜತೆಗೇ ಇದ್ದು ಬೆಂಬಲ ನೀಡುತ್ತಿದ್ದ ಮಾನ್ಯತಾ, ಆತನೊಂದಿಗೆ ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸಿಎನ್ಎನ್-ಐಬಿಎನ್ ವರದಿ ಮಾಡಿದೆ.
ಮತ್ತಷ್ಟು
ಕ್ಲಿನಿಕ್‌ಗಳ ನಿಯಂತ್ರಣಕ್ಕೆ ಸದ್ಯವೇ ಶಾಸನ
ಭಾರತಲ್ಲಿ ಬಂದಿಳಿದ ಕಿಡ್ನಿವೈದ್ಯ ಅಮಿತ್
ಮೊಹಾಲಿ ಕ್ರೀಡಾಂಗಣದಲ್ಲಿ ಅಗ್ನಿದುರಂತ
ಮತ್ತೊಮ್ಮೆ ಭಾರತಕ್ಕೆ ಅಣುಒಪ್ಪಂದ ಅವಕಾಶ ಲಭಿಸದು: ಮುಲ್‌ಫೋರ್ಡ್
ಬಾಬಾ ಅಮ್ಟೆ ಅಸ್ತಂಗತ
ಅರುಣಾಚಲ: ಪ್ರಧಾನಿ ಹೇಳಿಕೆಗೆ ಚೀನ ಆಕ್ಷೇಪ