ಜನವರಿ 1ರಂದು ರಾಮಪುರದ ಸಿಆರ್‌ಪಿಎಫ್ ಶಿಬಿರಕ್ಕೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪಾಕಿಸ್ತಾನೀಯರು ಸೇರಿದಂತೆ ಆರು ಮಂದಿ ಉಗ್ರಗಾಮಿಗಳನ್ನು ಉತ್ತರಪ್ರದೇಶ ವಿಶೇಷ ಕಾರ್ಯಾಚರಣಾ ಪಡೆಯು ಬಂಧಿಸಿದೆ.
ಎಸ್‌ಟಿಎಫ್ ಮೂಲಗಳ ಪ್ರಕಾರ, ಮೂವರು ಉಗ್ರರ ಬಳಿ ಪಾಕಿಸ್ತಾನೀ ಪಾಸ್‌ಪೋರ್ಟ್ ದೊರಕಿದ್ದು, ಅವರನ್ನು ಲಖ್ನೋದಲ್ಲಿ ಬಂಧಿಸಲಾಗಿದೆ ಮತ್ತು ಉಳಿದ ಮೂವರು ರಾಮಪುರದಲ್ಲಿ ಸೆರೆ ಸಿಕ್ಕಿದ್ದಾರೆ.
ಅವರಿಂದ ಎ.ಕೆ.47 ರೈಫಲ್ ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಕೈಬಾಂಬ್ ಮತ್ತು ಇತರ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ 1ರಂದು ಶಂಕಿತ ಲಷ್ಕರ್ ಇ ತೋಯ್ಬಾ ಉಗ್ರರು ಸಿಆರ್‌ಪಿಎಫ್ ಶಿಬಿರಕ್ಕೆ ದಾಳಿ ನಡೆಸಿ 9 ಮಂದಿಯನ್ನು ಹತ್ಯೆ ಮಾಡಿದ್ದರು. ಸಾವಿಗೀಡಾದವರಲ್ಲಿ ಐವರು ಸಿಆರ್‌ಪಿಎಫ್ ಸಿಬ್ಬಂದಿ, ಮೂವರು ಉತ್ತರ ಪ್ರದೇಶ ಪೊಲೀಸ್ ಪಡೆಯ ಸಿಬ್ಬಂದಿ ಹಾಗೂ ಒಬ್ಬ ರಿಕ್ಷಾವಾಲಾ ಸೇರಿದ್ದರು.
|