ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಕಲ್ಪ ಯಾತ್ರೆ ಮುಂದಕ್ಕೆ: ಆರೆಸ್ಸೆಸ್ ಒಪ್ಪಿಗೆ
ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಅವರ 'ಸಂಕಲ್ಪ ಯಾತ್ರೆ'ಯನ್ನು ಮುಂದೂಡಿರುವುದಕ್ಕೆ ಆರ್ಎಸ್ಎಸ್ ಒಪ್ಪಿಗೆ ಸೂಚಿಸಿದೆ.

ಆರೆಸ್ಸೆಸ್ ಮುಖವಾಣಿ 'ಆರ್ಗನೈಸರ್' ತನ್ನ ಸಂಪಾದಕೀಯದಲ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಲಹೆಯನ್ನು ಒಪ್ಪಿ ಬಿಜೆಪಿಯು ಸೂಕ್ತ ನಿರ್ಧಾರ ಕೈಗೊಂಡಿದೆ. ಆದರೆ ಪ್ರಮುಖ ಸಮಸ್ಯೆಯೆಂದರೆ 2008ರಲ್ಲಿ ನಡೆಯಲಿರುವ 10 ರಾಜ್ಯಗಳ ವಿಧಾನಸಭೆ ಚುನಾವಣೆಗಳು ಎಂದು ಹೇಳಿದೆ.

ಇದರರ್ಥ ಕೇಂದ್ರ ಸರಕಾರವು ಶಾಂತಿಯುತ ಮತ್ತು ಸುರಕ್ಷಿತ ಚುನಾವಣೆ ನಡೆಸುವ ಸ್ಥಿತಿಯಲ್ಲಿಲ್ಲ ಎಂದೇ? ಎಂಬುದಾಗಿ ಪ್ರಶ್ನಿಸಿರುವ ಸಂಪಾದಕೀಯ, ದೇಶದಲ್ಲಿ ಅಭದ್ರತೆ ಮತ್ತು ಹಾಹಾಕಾರ ಸೃಷ್ಟಿಸುವ ಜೆಹಾದಿ ಶಕ್ತಿಗಳನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಸೂಕ್ತ ಕಾರ್ಯತಂತ್ರ ರೂಪಿಸುವುದಕ್ಕೆ ಯುಪಿಎ ಸರಕಾರಕ್ಕಿದು ಸಕಾಲ ಎಂದು ಹೇಳಿದೆ.
ಮತ್ತಷ್ಟು
ಸಿಆರ್‌ಪಿಎಫ್ ಶಿಬಿರ ದಾಳಿ: ಆರು ಉಗ್ರರ ಸೆರೆ
ಸಂಜಯ್‌‌ನನ್ನು ವಿವಾಹವಾಗಿದ್ದೇನೆ: ಮಾನ್ಯತಾ
ಕ್ಲಿನಿಕ್‌ಗಳ ನಿಯಂತ್ರಣಕ್ಕೆ ಸದ್ಯವೇ ಶಾಸನ
ಭಾರತಲ್ಲಿ ಬಂದಿಳಿದ ಕಿಡ್ನಿವೈದ್ಯ ಅಮಿತ್
ಮೊಹಾಲಿ ಕ್ರೀಡಾಂಗಣದಲ್ಲಿ ಅಗ್ನಿದುರಂತ
ಮತ್ತೊಮ್ಮೆ ಭಾರತಕ್ಕೆ ಅಣುಒಪ್ಪಂದ ಅವಕಾಶ ಲಭಿಸದು: ಮುಲ್‌ಫೋರ್ಡ್