ಹಳೆ ನ್ಯಾಯಾಲಯದ ವ್ಯಾಜ್ಯಗಳನ್ನು ಮತ್ತೆ ಎತ್ತಿ ಹಿಡಿಯುವ ಮೂಲಕ ತನ್ನ ಆನೆಬಲವನ್ನು ಇಳಿಸಲು ಯತ್ನಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ವಾಕ್ಸಮರ ಸಾರಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಬೆಂಬಲ ವಾಪಸು ಪಡೆಯುವ ಹುಸಿ ಬಾಂಬೊಂದನ್ನು ಸಿಡಿಸಿದ್ದಾರೆ.
ಭೋಪಾಲದಲ್ಲಿ ನಡೆದ 'ಭೈಚಾರ ರಾಲಿ'( ಭಾತೃತ್ವ ಸಭೆ) ಯನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 'ತಾಜ್ ಕಾರಿಡಾರ್' ಪ್ರಕರಣವನ್ನು ಮತ್ತೆ ಕೆದಕಿ ಹಾಕುವ ಮೂಲಕ ನನ್ನನ್ನು ಸಮಸ್ಯೆಯೊಳಗೆ ಸಿಲುಕಿಸಿ ಹಾಕಲು ಪ್ರಯತ್ನಿಸುತ್ತಿದೆ ಎಂಬುದನ್ನು ಪುನರುಚ್ಚರಿಸಿದರು .
ಕಾಂಗ್ರೆಸ್ ಈ ರೀತಿಯ ಕುಂತ್ರವನ್ನು ನಿಲ್ಲಿಸಲು, ಈ ತಿಂಗಳಿನಲ್ಲಿ ಪ್ರಾರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದ ಬಳಿಕ ಬಿಎಸ್‌ಪಿ ಪಕ್ಷವು ಕೇಂದ್ರ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಾಸು ಪಡೆಯುಲಿದೆ ಎಂದು ಬೆದರಿಕೆ ಹಾಕಿದರು.
ಯುಪಿಎ ಸರಕಾರವು ತಮ್ಮ ಬೆಂಬಲಿತ ಪಕ್ಷಗಳ ಮೂಲಕ 'ತಾಜ್ ಕಾರಿಡಾರ್' ಕೇಸನ್ನು ಮತ್ತೆ ಎಬ್ಬಿಸಲು ಪ್ರಯತ್ನ ಪಡುತ್ತಿದ್ದು, ಇದರಿಂದಾಗಿ ನಾನು ಸಮಸ್ಯೆಯಲ್ಲಿ ಸಿಲುಕಿ ಬಿದ್ದಿದ್ದೇನೆ. ನಾನು ಕೇಸಿನ ಜೊತೆ ಮತ್ತೆ ಹೋರಾಡಲು ತೊಡಗಿದರೆ ಬಡವರ ಉದ್ಧಾರಕ್ಕಾಗಿ ಯಾವುದೇ ಕೆಲಸ ಮಾಡಲು ಆಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಅವರು ನನಗೆ ಒತ್ತಡವನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎನ್ನುವುದು ಕೂಡಾ ತಿಳಿದಿದೆ ಎಂದು ಕಾಂಗ್ರೇಸ್‌ಗೆ ಸವಾಲು ಹಾಕಿದರು.
|