ಸಾರ್ವಜನಿಕ ಸಮಾರಂಭವೊಂದರಲ್ಲಿ ಶಿಲ್ಪಾಶೆಟ್ಟಿಗೆ ಮುತ್ತಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಲಿವುಡ್ ನಟ ರಿಚರ್ಡ್‌ಗೇರ್ ವಿರುದ್ಧ ರಾಜಸ್ಥಾನ ಮತ್ತು ಉತ್ತರಪ್ರದೇಶದ ವಿವಿಧ ನ್ಯಾಯಾಲಯಗಳು ಹೊರಡಿಸಿರುವ ಬಂಧನ ವಾರಂಟ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿರುವ ಮನವಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ನೋಟೀಸ್‌ಗಳನ್ನು ಹೊರಡಿಸಿದೆ.
ಈ ರಾಜ್ಯಗಳ ಹೊರಗಡೆ ದಾಖಲಾಗಿರುವ ಪ್ರಕರಣಗಳ ವರ್ಗಾವಣೆಗೆ ಕೋರಿ ರಿಚರ್ಡ್ ಸಲ್ಲಿಸಿರುವ ಮನವಿಯಾಧಾರದಲ್ಲಿ ಫಿರ್ಯಾದುದಾರರು ಉತ್ತರಿಸುವಂತೆ ಸರ್ವೋಚ್ಛ ನ್ಯಾಯಾಲಯ ನೋಟೀಸ್ ನೀಡಿದೆ.
ಲಾರಿ ಚಾಲಕರಲ್ಲಿ ಏಡ್ಸ್ ವಿರುದ್ಧ ಅರಿವು ಮೂಡಿಸುವ ಪ್ರಚಾರಾಂದೋಲನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಹಾಲಿವುಡ್ ನಟ ರಿಚರ್ಡ್‌ಗೇರ್ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಶಿಲ್ಪಾ ಶಿಟ್ಟಿಯವರಿಗೆ ವೇದಿಕೆಯಲ್ಲಿ ಮುತ್ತಿಕ್ಕಿದ್ದರು. ಇದನ್ನು ಪ್ರತಿಭಟಿಸಿ, ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆ, ಇದು ಭಾರತೀಯ ಸಂಪ್ರದಾಯವಲ್ಲ ಎಂದು ಆಕ್ರೋಶಿತರು ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ದಾವೆ ಹೂಡಿದ್ದರು.
|