ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಿಗೆ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಗೌರವ ಪೌರ ಕಾನೂನು ಪದವಿಯನ್ನು ಜೂನ್ 18 ರಂದು ಪ್ರದಾನ ಮಾಡಲಿದೆ.
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರ ಜತೆಗೆ ಭಾರತದ ಆರ್ಥಿಕ ಸುಧಾರಣೆಯ ಶಿಲ್ಪಿಯಾಗಿರುವ ಮಾಂಟೆಕ್ ಸಿಂಗ್ ಅವರು, ತಮ್ಮ ಸ್ನಾತಕೋತ್ತರ ಮತ್ತು ಎ.ಫಿಲ್ ಪದವಿಗಳನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪಡೆದಿದ್ದರು. ಮಾಂಟೆಕ್ ಸಿಂಗ್ ಅವರು ತಮ್ಮ ಶಿಕ್ಷಣದ ಅವಧಿಯಲ್ಲಿ ಡಿಬೇಟಿಂಗ್ ಸೋಸೈಟಿಯ ಅಧ್ಯಕ್ಷರೂ ಕೂಡಾ ಆಗಿದ್ದರು.
ಮಾಂಟೆಕ್ ಅವರು ಭಾರತೀಯ ಹಣಕಾಸು ಸುಧಾರಣೆಯ ವಾಣಿಜ್ಯ ಕಾರ್ಯದರ್ಶಿಯಾಗಿ ಮತ್ತು ಹಣಕಾಸು ಸಚಿವಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯವು ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಅಹ್ಲುವಾಲಿಯಾ ಅವರು ಆರ್ಥಿಕತೆಯ ಕುರಿತು ಅಂಕಣ, ನಿಯತಕಾಲಿಕಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
ಜೂನ್ 18ರಂದು ಸಮಾರಂಭದಲ್ಲಿ ಅಹ್ಲುವಾಲಿಯಾ ಅವರೊಂದಿಗೆ ಥಾಮಸ್ ನೆಗೆಲ್, ಶೈಲಾ ಇವಾನ್ಸ್ ವಿಂಡ್‌ನಲ್,ಅಡಾ ಯೊಂತಾ,ಕರೋಲಿನ್ ಎಮ್ಮಾ ಕಿರ್ಕ್ಬಿ ಅವರಿಗೂ ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯವು ಹೇಳಿದೆ.
|