ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ಜನಾದೇಶ ಅವಶ್ಯಕತೆ ಇಲ್ಲ: ಕಾಂಗ್ರೆಸ್
ಅಮೆರಿಕದೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಮುಂದುವರಿಸಿ, ಭಾರತ-ಅಮೆರಿಕ ಅಣುಒಪ್ಪಂದವನ್ನು ಮುಂದುವರಿಸಲು ಕಾಂಗ್ರೆಸ್ ಇಚ್ಛಿಸಿದಲ್ಲಿ ಹೊಸ ಜನಾದೇಶವನ್ನು ಪಡೆಯಬೇಕು ಎಂಬ ಸಿಪಿಐ(ಎಂ) ಒತ್ತಾಯವನ್ನು ಅಲ್ಲಗಳೆದಿರುವ ಕಾಂಗ್ರೆಸ್ ಇದರ ಅವಶ್ಯಕತೆ ಇಲ್ಲ ಎಂದು ಹೇಳಿದೆ.

"ಹೊಸ ಜನಾದೇಶದ ಅವಶ್ಯಕತೆ ಇಲ್ಲ ಎಂಬುದಾಗಿ ಕಾಂಗ್ರೆಸ್ ನಂಬುತ್ತದೆ" ಎಂದು ಎಐಸಿಸಿ ವಕ್ತಾರ ಅಭಿಶೇಕ್ ಸಿಂಘ್ವಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು.

ಸರಕಾರವು ಅಮೆರಿಕದೊಂದಿಗೆ ವ್ಯೂಹಾತ್ಮಕ ಮೈತ್ರಿಯನ್ನು ಮುಂದುವರಿಸುವಂತಿಲ್ಲ ಮತ್ತು ಈ ನೀತಿಗಳನ್ನು ಮುಂದುವರಿಸಲು ಕಾಂಗ್ರೆಸ್ ಆಸಕ್ತಿ ತೋರಿದ್ದೇ ಆದಲ್ಲಿ, ಅದು ಮುಂದಿನ ಚುನಾವಣೆಯಲ್ಲಿ ಹೊಸ ಜನಾದೇಶವನ್ನು ಪಡೆಯಬೇಕು ಎಂಬುದಾಗಿ ಪ್ರಕಾಶ್ ಕಾರಟ್ ಸೋಮವಾರ ಹೇಳಿದ್ದರು.

ಅಣು ಒಪ್ಪಂದ ಸೇರಿದಂತೆ ಅಮೇರಿಕದೊಂದಿಗೆ ಇತರ ಸಂಬಂಧಗಳನ್ನು ಬಿಗಿಗೊಳಿಸಲು ಯುಪಿಎಗೆ ಎಡಪಕ್ಷಗಳು ಅವಕಾಶ ನೀಡುವುದಿಲ್ಲ ಎಂದ ಕಾರಟ್ ಹೇಳಿದ್ದರು.

ಅಣುಒಪ್ಪಂದದ ಕುರಿತು ಚರ್ಚಿಸಲು ಯುಪಿಎ ಮತ್ತು ಎಡಪಕ್ಷಗಳ ನಡುವೆ ಜಂಟಿಯಂತ್ರವಿದೆ. ಸಿಪಿಐ(ಎಂ) ಸಹ ಇದರ ಒಂದು ಅಂಗ. ಹೀಗಿರುವಾಗ ಇದನ್ನು ಹೊರತಾಗಿ ಯಾವುದೇ ವ್ಯಕ್ತಿಯೂ ಹೊರಗಡೆ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.
ಮತ್ತಷ್ಟು
ಮಾಂಟೆಕ್ ಸಿಂಗ್‌ಗೆ ಆಕ್ಸ್‌ಫರ್ಡ್‌ನಿಂದ ಗೌರವ ಪದವಿ
ರಿಚರ್ಡ್‌ಗೇರ್ ಚುಂಬನ: ಸು.ಕೋ ನೋಟೀಸ್
ಮರಾಠಿಗರ ಬೆಂಬಲಕ್ಕೀಗ ಉದ್ಭವ್ ಠಾಕ್ರೆ
ಬಂಧಿತ ಉಗ್ರರ ಗುರಿ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್
ಮಾಯಾವತಿಯ ಬೆಂಬಲ ವಾಪಾಸ್ 'ಬಾಂಬ್'
ಸಂಕಲ್ಪ ಯಾತ್ರೆ ಮುಂದಕ್ಕೆ: ಆರೆಸ್ಸೆಸ್ ಒಪ್ಪಿಗೆ