ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಕ್ಷ ನೇತೃತ್ವದ ಸರಕಾರ ಮಂಗಳವಾರ 1,12,472.72 ಕೋಟಿಯ ತೆರಿಗೆ ಮುಕ್ತ ಕೊರತೆ ಬಜೆಟ್ ಮಂಡಿಸಿತು. ಬಜೆಟ್ ಮಂಡನೆಗೆ ತೀವ್ರ ಅಡ್ಡಿಪಡಿಸಿದ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.
ಹೊಸತಾಗಿ ನೇಮಕವಾಗಿರುವ ರಾಜ್ಯ ವಿತ್ತ ಸಚಿವ ಲಾಲ್‌ಜಿ ವರ್ಮಾ, ಮುಖ್ಯಮಂತ್ರಿ ಮಾಯವತಿಯವರ ಉಪಸ್ಥಿತಿಯಲ್ಲಿ ಬಜೆಟ್ ಮಂಡಿಸಿದರು. ಬಜೆಟ್‌ಗೆ ವಿರೋಧ ವ್ಯಕ್ತಪಡಿಸಿದ ವಿಪಕ್ಷ ಸಭಾತ್ಯಾಗ ನಡೆಸಿತು.
ಸರಕಾರವು 2008ರ ಎಪ್ರಿಲ್ ಮತ್ತು ಮೇ ಖಾತೆಗಾಗಿ ಮತವನ್ನು ಪಡೆದುಕೊಂಡಿತು. ಖಾತೆ ಮೇಲಿನ ಮತವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ 'ಅಸಮಂಜಸ' ಎಂದು ಟೀಕಿಸಿದ್ದಾರೆ.
ಕಳೆದ 29.06.07ರಲ್ಲಿ ಮಂಡಿಸಲಾಗಿರುವ ಬಜೆಟ್‌ಗಿಂತ ಶೇ11ರಷ್ಟು ಹೆಚ್ಚಿನ 1,12,472.72 ಕೋಟಿ ಬಜೆಟ್ ಮಂಡಿಸಲಾಗಿದೆ. ನಿರೀಕ್ಷಿತ ವರಮಾನ 1,10,827.87 ಕೋಟಿ ಎಂದು ಅಂದಾಜಿಸಲಾಗಿದೆ. ಈ ಹಿಂದಿನಂತೆ ಹೊಸ ತೆರಿಗೆಗಳನ್ನು ವಿಧಿಸಲಾಗಿಲ್ಲ.
|