ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3 ವರ್ಷದಲ್ಲಿ ವ್ಯಾಪಾರ ದುಪ್ಪಟ್ಟಿಗೆ ಭಾರತ-ರಷ್ಯಾ ಒಪ್ಪಂದ
PTIPTI
ಭಾರತ ಮತ್ತು ರಷ್ಯ ಮೂರು ವರ್ಷಗಳೊಳಗಾಗಿ ತಮ್ಮ ನಡುವಿನ ವ್ಯಾಪಾರವನ್ನು ದುಪ್ಪಟ್ಟು ಪ್ರಮಾಣದಲ್ಲಿ ವೃದ್ಧಿಸುವ ಒಪ್ಪಂದಕ್ಕೆ ಬಂದಿವೆ.

2010ರೊಳಗಾಗಿ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಮುಂದಿನ ಮೂರು ವರ್ಷಗಳೊಳಗಾಗಿ ದುಪ್ಪಟ್ಟುಗೊಳಿಸಿ 10 ಶತಕೋಟಿ ಡಾಲರ್‌ಗೆ ಏರಿಸಲು ಸಮಗ್ರ ಆರ್ಥಿಕ ಸಹಕಾರ ಒಪ್ಪಂದವೊಂದರ ಮೂಲಕ ಮಾರುಕಟ್ಟೆಗಳನ್ನು ತೆರೆಯಲು ಉಭಯ ರಾಷ್ಟ್ರಗಳು ಪರಿಗಣಿಸಲಿವೆ.

"ವರ್ಷವೊಂದರ 30 ಶೇಕಡಾ ವೃದ್ಧಿಯಾದಲ್ಲಿ ನಾವು 2010ರೊಳಗಾಗಿ 10 ಶತಕೋಟಿ ಡಾಲರ್‌ಗಳ ವ್ಯಾಪಾರವನ್ನು ತಲುಪಲಿದ್ದೇವೆ" ಎಂದು ಭಾರತ ಪ್ರವಾಸದಲ್ಲಿರುವ ರಷ್ಯ ಪ್ರಧಾನಿ ವಿಕ್ಟರ್ ಎ ಝಬಕೋವ್ ಭಾರತ-ರಷ್ಯ ವ್ಯಾಪಾರ ಮತ್ತು ಹೂಡಿಕಾ ವೇದಿಕೆಯ ಸಭೆಯಲ್ಲಿ ನುಡಿದರು.

ಇದಕ್ಕೂ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ಜತೆ ಮಾತುಕತೆ ನಡೆಸಿದ ಝಬಕೋವ್, ತೈಲ, ಅನಿಲ, ಗಣಿಗಾರಿಕೆ, ತಂತ್ರಜ್ಞಾನ, ಸಾರಿಗೆ ಮತ್ತು ಇಂಧನ ವಲಯಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಸಾಮರ್ಥ್ಯವನ್ನು ಚರ್ಚಿಸಿದರು.

ರಷ್ಯಾದ ಹಣವನ್ನು ಭಾರತದ ಆರ್ಥಿಕತೆಯಲ್ಲಿ ಹೂಡಿಕೆ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ನುಡಿದರು.

ಅತ್ಯಂತ ಕ್ಷಿಪ್ರ ಅಭಿವೃದ್ಧಿಯ ನಾಲ್ಕು ಬ್ರಿಕ್(ಬ್ರೆಝಿಲ್, ರಷ್ಯ, ಭಾರತ ಮತ್ತು ಚೀನ) ಆರ್ಥಿಕತೆಗಳಲ್ಲಿ ಎರಡು ರಾಷ್ಟ್ರಗಳ ನಡುವಿನ ಮಾರುಕಟ್ಟೆ ಆರಂಭದ ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು ಜಂಟಿ ಕಾರ್ಯಪಡೆಯೊಂದು ಪರಿಗಣಿಸಲಿದೆ.

ಈ ಕಾರ್ಯಪಡೆಯು ಉಭಯ ರಾಷ್ಟ್ರಗಳ ನಡುವಿನ ಸಂಕೀರ್ಣ ಆರ್ಥಿಕ ಒಪ್ಪಂದಗಳ ಕುರಿತು ಅಧ್ಯಯನ ನಡೆಸಲಿದೆ ಎಂದು ರಷ್ಯಾದ ಆರ್ಥಿಕಾಭಿವೃದ್ಧಿ ಮತ್ತು ವ್ಯಾಪಾರ ಸಚಿವ ಇ.ಎಸ್. ನಬಿಯುಲ್ಲಿನ ಈ ಸಂದರ್ಭದಲ್ಲಿ ನುಡಿದರು.

ಟಿಟೇನಿಯಂ ಆಕ್ಸೈಡ್ ಉತ್ಪಾದನೆಯ ಕುರಿತು ಸಹಕಾರ ನಿರ್ಮಿಸಲು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಈ ಸಂದರ್ಭದಲ್ಲಿ ನುಡಿದ ವಾಣಿಜ್ಯ ಸಚಿವ ಕಮಲ್ ನಾಥ್, ರಷ್ಯಾದ ಹೂಡಿಕೆದಾರರು ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲೂ ಆಸಕ್ತಿವಹಿಸಿದ್ದಾರೆ ಎಂದು ತಿಳಿಸಿದರು.
ಮತ್ತಷ್ಟು
ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಅಜ್ಮಿ
ಉ.ಪ್ರ: ತೆರಿಗೆ ಮುಕ್ತ, ಕೊರತೆ ಬಜೆಟ್
ಠಾಕ್ರೆ ಬಂಧನ ವದಂತಿ: ಮುಂಬಯಿ ಉದ್ವಿಗ್ನ
ಮುಂಬಯಿ ತೊರೆಯುತ್ತಿರುವ ವಲಸಿಗರು
ಹೊಸ ಜನಾದೇಶ ಅವಶ್ಯಕತೆ ಇಲ್ಲ: ಕಾಂಗ್ರೆಸ್
ಮಾಂಟೆಕ್ ಸಿಂಗ್‌ಗೆ ಆಕ್ಸ್‌ಫರ್ಡ್‌ನಿಂದ ಗೌರವ ಪದವಿ