ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿತ
PTIPTI
ಅಳಿಯುತ್ತ ಹೋಗುತ್ತಿರುವ ಹುಲಿಸಂತತಿಯ ಉಳಿವಿಗಾಗಿ ಹಮ್ಮಿಕೊಂಡಿರುವ ಹುಲಿ ಯೋಜನೆಯು ಮಾಂತ್ರಿಕ ಪರಿಣಾಮವನ್ನೇನೂ ಬೀರಲಿಲ್ಲ ಎಂಬ ಅಂಶವನ್ನು ಹುಲಿಗಣತಿಯ ಅಂಕಿ ಅಂಶಗಳು ಹೊರಸೂಸಿವೆ.

ಹುಲಿ ಯೋಜನೆಯು 1973ರಲ್ಲಿ ಆರಂಭವಾಗಿದೆ. ಪ್ರಸ್ತುತ ಪಂಚವಾರ್ಷಿಕ ಯೋಜನೆಯಲ್ಲೂ ಹುಲಿಯೋಜನೆಗೆ ಆದ್ಯತೆ ನೀಡಲಾಗಿದ್ದು, ಮೊತ್ತವನ್ನು ನಿಗದಿಪಡಿಸಲಾಗಿದೆ. ಹುಲಿಯೋಜನೆಯ ಆರಂಭದ ಬಳಿಕ ಹುಲಿ ಅಭಯಾರಣ್ಯಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ. ರಾಷ್ಟ್ರದಲ್ಲಿ ಒಟ್ಟು 28 ಹುಲಿ ರಕ್ಷಣಾ ಅಭಯಾರಣ್ಯಗಳಿವೆ. ಇಷ್ಟಾದರೂ ಹುಲಿಗಳ ಕುರಿತ ಗಣತಿಯು ಆಘಾತಕಾರಿ ಅಂಶಗಳನ್ನು ನೀಡಿದೆ.

ಹುಲಿಯೋಜನೆ ಜಾರಿಗೆ ಬರುವುದಕ್ಕೆ ಮುನ್ನ 1972ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 1,827 ಆಗಿತ್ತು. 1997ರ ಗಣತಿ ಪ್ರಕಾರ ಹುಲಿಗಳ ಸಂಖ್ಯೆಯು 3,507 ಇತ್ತಾದರೂ 2006ರ ಗಣತಿಯು 1,141ರ ಗಣನೀಯ ಕುಸಿತವನ್ನು ದಾಖಲಿಸಿದೆ.

ಉತ್ತರಾಂಚಲದಲ್ಲಿರುವ ಕಾರ್ಬೆಟ್ ರಾಷ್ಟ್ರೀಯ ಪಾರ್ಕ್, ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆಯಲ್ಲಿರುವ ಅಭಯಾರಣ್ಯಗಳು ಸುರಕ್ಷಿತ ತಾಣಗಳೆಂದು ಅಂಕಿಅಂಶಗಳು ಹೇಳುತ್ತಿದ್ದು, ಇಲ್ಲಿ ಹೆಚ್ಚೂ ಕಡಿಮೆ ವ್ಯಾಘ್ರಗಳ ಸಂಖ್ಯೆಗಳಲ್ಲಿ ದೊಡ್ಡ ಬದಲಾವಣೆಗಳಾಗಿಲ್ಲ.

ಕೇಂದ್ರ ಮತ್ತು ಪಶ್ಚಿಮ ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಲ್ಲಿ ಈ ಅಪರೂಪದ ಜೀವಿಗಳ ಸಂಖ್ಯೆ ಅರ್ಧಕ್ಕರ್ಧ ಇಳಿದಿದೆ.

ಮಧ್ಯಪ್ರದೇಶದ ಪನ್ನಾ, ಕನ್ಹಾ ಹಾಗೂ ಮಹರಾಷ್ಟ್ರದ ಮೆಲ್ಘಾಟ್‌ಗಳಲ್ಲಿಯೂ ಇವುಗಳ ಸಂತತಿ ವಿನಾಶದತ್ತ ಸಾಗುತ್ತಿರುವುದನ್ನು ಅಂಕೆ ಸಂಖ್ಯೆಗಳು ಹೇಳಿವೆ.

ಮಧ್ಯಪ್ರದೇಶದಲ್ಲಿ 2002ರಲ್ಲಿ 710 ಇದ್ದ ಸಂಖ್ಯೆ 2006ರ ಗಣತಿಯ ವೇಳೆ 300ಕ್ಕಿಳಿದಿದೆ. ಒರಿಸ್ಸಾದಲ್ಲಿ 173 ರಿಂದ 45ಕ್ಕಿಳಿದಿದೆ. ಮಹಾರಾಷ್ಟ್ರದಲ್ಲಿ 2002ರಲ್ಲಿ 238 ಇದ್ದ ವ್ಯಾಘ್ರಗಳ ಸಂಖ್ಯೆಯು 2006ರ ವೇಳೆಗೆ 103ಕ್ಕಿಳಿದಿದೆ. ಅಂಧ್ರದ ಹುಲಿಗಳು 238 ಇದ್ದದ್ದು 103ಕ್ಕೆ ಕುಸಿದಿವೆ. ಚತ್ತೀಸ್‌ಗಢದಲ್ಲಿ 227 ಇದ್ದ ಸಂಖ್ಯೆ 26ಕ್ಕಿಳಿದು ಆತಂಕ ಹುಟ್ಟಿಸಿದೆ.
ಮತ್ತಷ್ಟು
3 ವರ್ಷದಲ್ಲಿ ವ್ಯಾಪಾರ ದುಪ್ಪಟ್ಟಿಗೆ ಭಾರತ-ರಷ್ಯಾ ಒಪ್ಪಂದ
ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಅಜ್ಮಿ
ಉ.ಪ್ರ: ತೆರಿಗೆ ಮುಕ್ತ, ಕೊರತೆ ಬಜೆಟ್
ಠಾಕ್ರೆ ಬಂಧನ ವದಂತಿ: ಮುಂಬಯಿ ಉದ್ವಿಗ್ನ
ಮುಂಬಯಿ ತೊರೆಯುತ್ತಿರುವ ವಲಸಿಗರು
ಹೊಸ ಜನಾದೇಶ ಅವಶ್ಯಕತೆ ಇಲ್ಲ: ಕಾಂಗ್ರೆಸ್