ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಹಾರಾಷ್ಟ್ರಕ್ಕೆ ಹೆಚ್ಚುವರಿ ಅರೆಸೇನಾಪಡೆಗಳು
ಉತ್ತರ ಭಾರತೀಯರ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಹಬ್ಬಿರುವ ಚಳುವಳಿಯು ಹೊಸಹೊಸ ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಕೇಂದ್ರ ಅರೆಸೇನಾಪಡೆಗಳು ರಾಜ್ಯಕ್ಕೆ ಧಾವಿಸಿವೆ.

ರಾಜ್ಯ ಸರಕಾರದ ಕೋರಿಕೆಯಂತೆ ಗೃಹಸಚಿವಾಲಯವು ಕೇಂದ್ರೀಯ ಪಡೆಗಳನ್ನು ಒದಗಿಸುತ್ತಿದೆ. ಕ್ಷಿಪ್ರ ಕ್ರಿಯಾ ಪಡೆ(ಆರ್ಎಎಫ್) ಇದೀಗಾಗಲೆ ಮುಂಬೈಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹಿರಿಯ ಎಂಎಚ್ಎ ಅಧಿಕಾರಿ ಮಂಗಳವಾರ ಹೇಳಿದ್ದಾರೆ.

ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರದೊಂದಿಗೆ ನಿಕಟ ಹಾಗೂ ನಿರಂತರ ಸಂಪರ್ಕದಲ್ಲಿದೆ, ರಾಜ್ಯಾದ್ಯಂತ ಶಾಂತಿ ನೆಲೆಸುವಂತೆ ಮತ್ತು ದುಷ್ಕರ್ಮಿಗಳ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವಾಲಯುವು ಮಹಾರಾಷ್ಟ್ರಕ್ಕೆ ಸಲಹೆ ನೀಡಿರುವುದಾಗಿ ಅವರು ತಿಳಿಸಿದರು.

ಉತ್ತರ ಭಾರತದ ಹಣ್ಣಿನ ವ್ಯಪಾರಿಗಳ ಮೇಲೆ ಮಂಗಳವಾರ ಎಂಎನ್ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ವೇಳೆ ಹಿಂಸಾಚಾರ ನಾಸಿಕ್‌ಗೆ ಹರಡಿತ್ತು. ಪುಣೆ, ಔರಂಗಾಬಾದ್, ನಂದೇಡ್, ಲಾಥುರ್ ಮತ್ತು ಅಮ್ರಾವತಿಯಲ್ಲೂ ಗಲಭೆಗಳು ಸಂಭವಿಸಿವೆ.

ಉತ್ತರ ಭಾರತೀಯರ ವಿರುದ್ಧ ರಾಜ್‌ಠಾಕ್ರೆ ಫೆ.3ರಂದು ವಾಗ್ದಾಳಿ ನಡೆಸಿದ ಬಳಿಕ ಮುಂಬೈಯಲ್ಲಿ ಹಿಂಸಾಚಾರ, ಗಲಭೆಗಳು ಆರಂಭಗೊಂಡಿದೆ.
ಮತ್ತಷ್ಟು
ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿತ
3 ವರ್ಷದಲ್ಲಿ ವ್ಯಾಪಾರ ದುಪ್ಪಟ್ಟಿಗೆ ಭಾರತ-ರಷ್ಯಾ ಒಪ್ಪಂದ
ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಅಜ್ಮಿ
ಉ.ಪ್ರ: ತೆರಿಗೆ ಮುಕ್ತ, ಕೊರತೆ ಬಜೆಟ್
ಠಾಕ್ರೆ ಬಂಧನ ವದಂತಿ: ಮುಂಬಯಿ ಉದ್ವಿಗ್ನ
ಮುಂಬಯಿ ತೊರೆಯುತ್ತಿರುವ ವಲಸಿಗರು