ದೆಹಲಿ ನಗರದ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಅಂಗಡಿಗಳಿಗೆ ಈ ಹಿಂದಿನ ಆದೇಶದಂತೆ ಮಾಡಲಾಗಿದ್ದ ಬೀಗಮುದ್ರೆ ತೆರವಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ. ಇದರಿಂದಾಗಿ ಸಾವಿರಾರು ಅಂಗಡಿ ಮಾಲಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈ ತೀರ್ಪನ್ನು ಘೋಷಿಸುವ ವೇಳೆಗೆ, ವ್ಯಾಪಾರಿಗಳು ಮತ್ತು ವಾಣಿಜ್ಯ ಕಟ್ಟಡಗಳ ಮಾಲಕರು ಈ ಪ್ರಕರಣದ ಕುರಿತಂತೆ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರುವಂತೆ ಮಚ್ಚಳಿಕೆ ಸಲ್ಲಿಸುವಂತೆ ತಾಕೀತು ಮಾಡಿದೆ.
ದೆಹಲಿ ವರ್ತಕರು ಮತ್ತು ಈ ವಿಚಾರದಲ್ಲಿ ಒಳಗೊಂಡಿರುವ ಇತರರ ಮನವಿಗಳನ್ನು ಆಲಿಸಬೇಕಿರುವ ಹಿನ್ನೆಲೆಯಲ್ಲಿ ಬೀಗಮುದ್ರೆ ಹಿಂತೆಗೆತದ ಕುರಿತಂತೆ ಅಂತಿಮ ತೀರ್ಪನ್ನು ನ್ಯಾಯಾಲಯವು ಜುಲೈ 7ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್, ಸಿ.ಕೆ ತಕ್ಕರ್ ಮತ್ತು ಲೇಕೇಶ್ವರ್ ಸಿಂಗ್ ಅವರುಗಳನ್ನೊಳಗೊಂಡಿದ್ದ ನ್ಯಾಯಪೀಠವು, ಬೀಗಮುದ್ರೆ ಹಿಂತೆಗೆತಕ್ಕೆ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.
|