ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಇತರರು ಒಳಗೊಂಡಿರುವ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ರಾಯ್‌ಬರೇಲಿ ನ್ಯಾಯಾಲಯದಿಂದ ಲಕ್ನೋ ನ್ಯಾಯಾಲಯಕ್ಕೆ ವರ್ಗಾಯಿಸಲು ನಿರಾಕರಿಸಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅನರನ್ನೊಳಗೊಂಡಿದ್ದ ತ್ರಿಸದಸ್ಯ ನ್ಯಾಯಪೀಠವು ಕ್ಯುರೇಟಿವ್ ದೂರನ್ನು ತಳ್ಳಿಹಾಕಿದೆ.
ಮೊಹಮ್ಮದ್ ಅಸ್ಲಾಮ್ ಅಲಿಯಾಸ್ ಭೂರೆ ಸಲ್ಲಿಸಿದ್ದ ಪರಾಮರ್ಷೆ ಅರ್ಜಿಯನ್ನು ನ್ಯಾಯಾಲಯ ಈ ಮೊದಲು ವಜಾ ಮಾಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಅವರು ಸಲ್ಲಿಸಲಾಗಿರುವ ವಿಶೇಷ ರಜಾ ದೂರನ್ನೂ(ಎಸ್‌ಎಲ್‌ಪಿ) ಸಹ ನ್ಯಾಯಾಲಯ ವಜಾ ಮಾಡಿದೆ.
|