ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಬಂಧನ
ಉತ್ತರ ಭಾರತೀಯರ ವಿರುದ್ಧ ಉದ್ರೇಕಕಾರಿ ಮಾತುಗಳನ್ನಾಡಿ ತೀವ್ರ ವಿವಾದಲ್ಲಿ ಸಿಲುಕಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಅವರನ್ನು ಬುಧವಾರ ಅಪರಾಹ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೀಡಾದ ಠಾಕ್ರೆಯವರನ್ನು ವಿಕ್ರೋಲಿ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಕರೆದೊಯ್ಯಲಾಗಿದೆ.

ಸಮುದಾಯಗಳ ನಡುವೆ ಈರ್ಷ್ಯೆ ಹುಟ್ಟಿಸುವಂತಹ ಪ್ರಚೋದನಕಾರಿ ಮಾತುಗಳನ್ನಾಡಿರುವ ರಾಜ್ ಠಾಕ್ರೆ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದು ಪ್ರಥಮ ಮಾಹಿತಿ ವರದಿ ಸಲ್ಲಿಸಲಾಗಿದೆ.

ಇವರ ಬಂಧನದಿಂದ ಸಂಭಾವ್ಯ ಗಲಭೆಗನ್ನು ತಪ್ಪಿಸುವ ನಿಟ್ಟಿನಲ್ಲಿ ಭಾರೀ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ರಾಜ್ಯಾದ್ಯಂತ ಸುಮಾರು 1,800ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ.

ಅಜ್ಮಿ ಬಂಧನ
ಏತನ್ಮಧ್ಯೆ, ಉದ್ರೇಕಕಾರಿ ಭಾಷಣ ಮಾಡಿರುವ ಕಾರಣಕ್ಕೆ ಮೊಕದ್ದಮೆ ದಾಖಲಾಗಿರುವ ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ ಅವರನ್ನೂ ಬಂಧಿಸಲಾಗಿದೆ.

ಮುಂಬೈ ಮಹಾನಗರಿಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಮಂಗಳವಾರ ರಾತ್ರಿಯಿಂದಲೇ ಪೊಲೀಸರ ಬಂಧನ ಕಾರ್ಯಕ್ರಮ ಆರಂಭವಾಗಿದ್ದು, ಎಂಎನ್ಎಸ್‌ನ ರಾಜ್ಯ ಕಾರ್ಯದರ್ಶಿ ವಸಂತ್ ಗಿಟೆ ಅವರನ್ನೂ ಬುಧವಾರ ಮುಂಜಾನೆ ಬಂಧಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇದುವರೆಗೆ 1,800 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀರ್ ಮಹಾನಿರ್ದೇಶಕ ಪಿ.ಎಸ್.ಪಸ್ರಿಚ ಹೇಳಿದ್ದಾರೆ. ಬುಧವಾರದಂದು ಯಾವುದೇ ಹೊಸ ಗಲಭೆ ಪ್ರಕರಣಗಳು ದಾಖಲಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

"ಎಲ್ಲವೂ ನಿಯಂತ್ರಣದಲ್ಲಿದೆ ಮಹಾರಾಷ್ಟ್ರ ಮತ್ತು ಮುಂಬೈಯನ್ನು ರಕ್ಷಿಸಲು ನಾವು ಸಮರ್ಥರಿದ್ದೇವೆ. ಮುಂಬೈಯವರು ಹೆದರುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಕಾನೂನು ರೀತ್ಯಾ ಮಾಡಲಾಗುತ್ತದೆ" ಎಂದು ಅವರು ಭರವಸೆ ನೀಡಿದ್ದಾರೆ.
ಮತ್ತಷ್ಟು
ಬಾಬರಿ ಮಸೀದಿ ಧ್ವಂಸ: ಪರಾಮರ್ಷೆ ಅರ್ಜಿ ವಜಾ
ದೆಹಲಿ ಬೀಗಮುದ್ರೆ ತೆರವಿಗೆ ಸು.ಕೋ. ಅಸ್ತು
ಸೋನಿಯಾ ವಿರುದ್ಧ ದೂರು: ನಿರ್ಧಾರ ಮುಂದಕ್ಕೆ
ಮಹಾರಾಷ್ಟ್ರಕ್ಕೆ ಹೆಚ್ಚುವರಿ ಅರೆಸೇನಾಪಡೆಗಳು
ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿತ
3 ವರ್ಷದಲ್ಲಿ ವ್ಯಾಪಾರ ದುಪ್ಪಟ್ಟಿಗೆ ಭಾರತ-ರಷ್ಯಾ ಒಪ್ಪಂದ