ಬಾಂಗ್ಲಾದೇಶದ ವಿವಾದಾಸ್ಪದ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ಅವಧಿಯನ್ನು ಷರತ್ತುಬದ್ಧವಾಗಿ ಮುಂದುವರಿಸುವ ಸೂಚನೆಯನ್ನು ಬುಧವಾರ ಕೇಂದ್ರ ಸರಕಾರ ನೀಡಿದೆ. ಅವರ ವೀಸಾ ಅವಧಿಯು ಫೆ.17ಕ್ಕೆ ಅಂತ್ಯಗೊಳ್ಳಲಿದೆ.
ತಸ್ಲಿಮಾ ಅವರು ಭಾರತೀಯರ ಧಾರ್ಮಿಕ ಭಾವನೆಗಳನ್ನು ಗೌರವಿಸಲು ಒಪ್ಪಿದಲ್ಲಿ ಮಾತ್ರ ತಸ್ಲಿಮಾ ಅವರ ಭಾರತ ವಾಸ್ತವ್ಯದ ಅವಕಾಶವನ್ನು ವಿಸ್ತರಿಸಲಾಗುವುದು ಎಂಬುದಾಗಿ ಕೇಂದ್ರ ಸರಕಾರ ಹೇಳಿದೆ. ಸರಕಾರದ ಈ ಹೇಳಿಕೆಯು ಮುಸ್ಲಿಂ ಮೂಲಭೂತವಾದಿಗಳಿಗೆ ಪಥ್ಯವಾಗಲಾರದು.
ಕೋಲ್ಕತಾದಲ್ಲಿ ತಸ್ಲಿಮಾ ವಿರುದ್ಧ ಮೂಲಭೂತವಾಗಿ ಮುಸ್ಲಿಮರು ಪ್ರತಿಭಟನೆ ನಡೆಸಿದ ಬಳಿಕ ಕೋಲ್ಕತಾ ತೊರೆದಿರುವ ಅವರು ಇದೀಗ ಸರಕಾರದ ಸಂಪೂರ್ಣ ಭದ್ರತೆಯ ರಹಸ್ಯ ತಾಣವೊಂದರಲ್ಲಿ ನೆಲೆಸಿದ್ದಾರೆ.
|