ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜನಿಷ್ಠೆ: ಸೋನಿಯಾಗೆ ನೋಟೀಸ್
ಬೆಲ್ಜಿಯಂನ ಅತ್ಯುನ್ನತ ಪೌರಪ್ರಶಸ್ತಿ 'ಆರ್ಡರ್ ಆಫ್ ಲಿಯೋಪೋಲ್ಡ್' ಸ್ವೀಕರಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಚುನಾವಣಾ ಆಯೋಗವು ನೋಟೀಸ್ ನೀಡಿದೆ.

ಪ್ರಶಸ್ತಿಯು ನಿರುಪದ್ರವಿಯಾಗಿದ್ದರೂ, ಪ್ರಯಸ್ತಿ ಪಡೆಯಲು ಸೋನಿಯಾ ಗಾಂಧಿ ಬೆಲ್ಜಿಯಂ ಸರಕಾರಕ್ಕೆ ನಿಷ್ಠೆಯ ಸಹಿ ಮಾಡಿರುವುದನ್ನು ಚುನಾವಣಾ ಆಯೋಗವು ಆಕ್ಷೇಪಿಸಿದೆ. ಸೋನಿಯಾ 2005ರಲ್ಲಿ ಈ ಪ್ರಶಸ್ತಿ ಪಡೆದಿದ್ದರು.

ಕೇರಳ ಮೂಲದ ವಕೀಲರೊಬ್ಬರು ಈ ಕುರಿತು ತಗಾದೆ ಎತ್ತಿದ್ದು ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ದೂರು ನೀಡಿದ್ದರು. ರಾಷ್ಟ್ರಪತಿಗಳು ಅದನ್ನು ಚುನಾವಣಾ ಆಯೋಗಕ್ಕೆ ಕಳುಹಿದ್ದರು.

ಈ ಕುರಿತಂತೆ ಸರಣಿ ಸಭೆಗಳು ನಡೆದಿದ್ದವಾದರೂ ಬರಿಯ ಚರ್ಚೆಗಳು ಮಾತ್ರ ನಡೆದಿದ್ದವೇ ವಿನಹ ಯಾವುದೇ ನಿರ್ಧಾರ ಹೊರಬಿದ್ದಿರಲಿಲ್ಲ.

ಮುಖ್ಯ ಚುನಾವಣಾ ಆಯುಕ್ತರು ಈ ಕುರಿತು ನೋಟೀಸ್ ನೀಡುವ ಪರವಾಗಿದ್ದರೂ, ಅವರ ಸಹ ಆಯುಕ್ತರಲ್ಲೊಬ್ಬರಾದ ನವೀನ್ ಚಾವ್ಲಾ ನೋಟೀಸ್ ಕಳುಹಿಸುವುದು ಅಪ್ರಯೋಜಕ ಎಂದು ಭಾವಿಸಿದ್ದರೆನ್ನಲಾಗಿದೆ.

ಈ ಪ್ರಶಸ್ತಿಯನ್ನು ಈ ಹಿಂದೆ ಮಾಜಿ ಅಮೆರಿಕ ದ್ವಿಗ್ತ್ ಡಿ ಐಸೆನ್‌ಹೋವರ್ ಮತ್ತು ಯುಗಸ್ಲೋವ್ ನಾಯಕ ಜೋಸೆಪ್ ಟೈಟೋ ಅವರಿಗೂ ನೀಡಲಾಗಿತ್ತು. ಅಂತೆಯೇ ಸೋನಿಯಾಗೂ ನೀಡಲಾಗಿದೆ ಎಂಬುದು ಚಾವ್ಲಾ ಅವರ ಅಭಿಪ್ರಾಯವಾಗಿತ್ತು.

ಸೋನಿಯಾ ಅವರ ಸಂಸತ್ ಸದಸ್ಯತ್ವನ್ನು ಕಿತ್ತು ಹಾಕಬೇಕು ಎಂಬ ದೂರುದಾರರ ನಿಲುವು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಈ ಕುರಿತು ಪ್ರತಿಕ್ರಿಯಿಸಿದೆ.
ಮತ್ತಷ್ಟು
ನಾಸಿಕ್ ಗಲಭೆಯಲ್ಲಿ ಒಂದು ಸಾವು
ಬಂಧನಕ್ಕೀಡಾದ ರಾಜ್ ಠಾಕ್ರೆ, ಅಜ್ಮಿಗೆ ಜಾಮೀನು
ತಸ್ಲಿಮಾ ವೀಸಾ ಮುಂದುವರಿಕೆ ಸುಳಿವು
ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಬಂಧನ
ಬಾಬರಿ ಮಸೀದಿ ಧ್ವಂಸ: ಪರಾಮರ್ಷೆ ಅರ್ಜಿ ವಜಾ
ದೆಹಲಿ ಬೀಗಮುದ್ರೆ ತೆರವಿಗೆ ಸು.ಕೋ. ಅಸ್ತು