ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಂಧ್ರ: ಟಿಆರ್ಎಸ್ ಶಾಸಕರ ಅಮಾನತು
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ಆಂಧ್ರ ವಿಧಾನಸಭಾ ಅಧಿವೇಶನದ ಕಲಾಪಗಳಿಗೆ ಅಡ್ಡಿಪಡಿಸಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಯ ನಾಯಕ ಜಿ.ವಿಜಯರಾಮ ರಾವ್ ಹಾಗೂ ಇತರ 12 ಸದಸ್ಯರನ್ನು ಐದು ದಿನಗಳಕಾಲ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

ಸದನದ ಭಾವಿಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದ ಇವರನ್ನು ತಮ್ಮ ಸ್ಥಾನಗಳಿಗೆ ತೆರಳಿ ಕಲಾಪ ಮುನ್ನಡೆಸಲು ಅನುವು ನೀಡುವಂತೆ ಸಭಾಪತಿ ಕೆ.ಆರ್.ಸುರೇಶ್ ರೆಡ್ಡಿ ಅವರು ಪದೇಪದೇ ವಿನಂತಿಸಿದರೂ ಸುಮ್ಮನಾಗದ ಇವರನ್ನು ಅಮಾನತು ಗೊಳಿಸಲಾಯಿತು.

ಶಾಸಕಾಂಗ ವ್ಯವಹಾರಗಳ ಸಚಿವ ಕೆ. ರೋಸಯ್ಯ ಅವರು ಅಮಾನತು ಮಸೂದೆಯನ್ನು ಮಂಡಿಸಿದ್ದು ಧ್ವನಿಮತದಿಂದ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ.

ಆಡಳಿತಾರೂಢ ಕಾಂಗ್ರೆಸ್ ತೆಲಂಗಾಣ ಜನತೆಯನ್ನು ವಂಚಿಸುತ್ತಿದೆ ಎಂಬುದಾಗಿ ಘೋಷಣೆ ಕೂಗುತ್ತಿದ್ದ ಟಿಆರ್ಎಸ್ ಸದಸ್ಯರನ್ನು ಮಾರ್ಶಲ್‌ಗಳು ಎತ್ತಿ ಸದನದಿಂದ ಹೊರಹಾಕಿದರು.
ಮತ್ತಷ್ಟು
ಸರ್ಕಾರ್ ಕೊಲೆ: ಪಪ್ಪು ಯಾವದವ್‌ಗೆ ಜೀವಾವಧಿ
ರಾಜನಿಷ್ಠೆ: ಸೋನಿಯಾಗೆ ನೋಟೀಸ್
ನಾಸಿಕ್ ಗಲಭೆಯಲ್ಲಿ ಒಂದು ಸಾವು
ಬಂಧನಕ್ಕೀಡಾದ ರಾಜ್ ಠಾಕ್ರೆ, ಅಜ್ಮಿಗೆ ಜಾಮೀನು
ತಸ್ಲಿಮಾ ವೀಸಾ ಮುಂದುವರಿಕೆ ಸುಳಿವು
ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಬಂಧನ