ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಸ್ಲಿಮಾ ವೀಸಾ ಅವಧಿ ಮುಂದರಿಕೆ
PTI
ಸರಕಾರದ ಆಶ್ರದಲ್ಲಿರುವ ಬಾಂಗ್ಲಾದೇಶದ ವಿವಾದಾಸ್ಪದ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರಕಾರ ಗುರವಾರ ತಡರಾತ್ರಿ ನಿರ್ಧರಿಸಿದೆ.

ತಸ್ಲಿಮಾ ಅವರು ಭಾರತೀಯ ಸಂಪ್ರದಾಯಗಳ ಕುರಿತು ಸೂಕ್ಷ್ಮವಾಗಿರಬೇಕು ಮತ್ತು ಭಾರತದ ಜಾತ್ಯತೀತ ಭಾವನೆಗಳಿಗೆ ನೋವುಂಟು ಮಾಡಬಾರದು ಎಂಬ ಎಚ್ಚರಿಕೆಯೊಂದಿಗೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

ಭಾರತದ ಇತಿಹಾಸದುದ್ದಕ್ಕೂ ಆಶ್ರಯ ಯಾಚಿಸಿದವರಿಗೆ ಆತಿಥ್ಯ ನೀಡಿದ ಸಂಪ್ರದಾಯವಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ನವತೇಜ್ ಸರ್ನಾ ಹೇಳಿದ್ದಾರೆ.

ಅತಿಥಿಗಳಾಗಿ ಬಂದವರಿಗೆ ಭಾರತವು ರಕ್ಷಣೆಯನ್ನೂ ನೀಡಿದೆ. ತಸ್ಲಿಮಾ ನಸ್ರೀನ್ ನಮ್ಮ ಅತಿಥಿ. ನಮ್ಮ ಸಂಪ್ರದಾಯಗಳನ್ನು ಗಮನದಲ್ಲಿರಿಸಿಕೊಂಡು ಅದೇ ಸವಲತ್ತುಗಳನ್ನು ಅವರಿಗೆ ನೀಡಿದ್ದೇವೆ ಎಂದು ಅವರು ಹೇಳಿದರು.
ಮತ್ತಷ್ಟು
ಪೆಟ್ರೋ ಬೆಲೆ: ಯುಪಿಎ, ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಅಧಿಸೂಚನೆ
ಆಂಧ್ರ: ಟಿಆರ್ಎಸ್ ಶಾಸಕರ ಅಮಾನತು
ಸರ್ಕಾರ್ ಕೊಲೆ: ಪಪ್ಪು ಯಾವದವ್‌ಗೆ ಜೀವಾವಧಿ
ರಾಜನಿಷ್ಠೆ: ಸೋನಿಯಾಗೆ ನೋಟೀಸ್