ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉ.ಪ್ರ: ರಾಣಿ ಲಕ್ಷ್ಮಿಬಾಯಿ ಪುಸ್ತಕ ನಿಷೇಧ
ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರನ್ನು 'ಕೆಟ್ಟ ರೀತಿಯಲ್ಲಿ' ಚಿತ್ರಿಸಲಾಗಿದೆ ಎಂಬ ಆಪಾದನೆಗೀಡಾಗಿರುವ ಪುಸ್ತಕವೊಂದರ ಮಾರಾಟ ಹಾಗೂ ವಿತರಣೆಯನ್ನು ಉತ್ತರಪ್ರದೇಶ ಸರಕಾರ ನಿಷೇಧಿಸಿದೆ.

'ರಾಣಿ' ಎಂಬ ಹೆಸರಿನಲ್ಲಿ ಜೈಶ್ರೀ ಮಿಶ್ರಾ ಎಂಬವರು ಬರೆದಿರುವ ಈ ಪುಸ್ತಕವು ರಾಣಿ ಲಕ್ಷ್ಮಿಯ ಖಾಸಗಿ ಬದುಕಿಗೆ ಸಂಬಂಧಿಸಿದಂತೆ ಆಕ್ಷೇಪಣಾರ್ಹ ವಿಚಾರಗಳನ್ನು ಹೊಂದಿದೆ ಎಂದು ಆಪಾದಿಸಲಾಗಿದೆ.

"ಆ ದಿನಗಳಲ್ಲಿ ಅವರ ಭೇಟಿ ದೈನಂದಿನವಾಗಿತ್ತು. ನಸುಕಿನಲ್ಲಿ, ಕೆಲವೊಮ್ಮೆ ಮುಸ್ಸಂಜೆಯಲ್ಲಿ ಅವರು ಕಾಡಿನಲ್ಲಿ ಭೇಟಿಯಾಗಲು ಪ್ರಯಾಣಿಸುತ್ತಿದ್ದರು" ಎಂಬುದಾಗಿ ರಾಣಿಗೆ ಬ್ರಿಟಿಷ್ ಅಧಿಕಾರಿ ಜತೆಗೆ ಸಂಬಂಧವಿತ್ತೆಂಬುದಾಗಿ ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ.

ಅಕೆಯೊಬ್ಬ ಧೀರ ಸ್ವಾತಂತ್ರ್ಯ ಹೋರಾಟಗಾರ್ತಿ. ಕೃತಿಕರ್ತೃ ಈ ರೀತಿ ಬರೆಯುವ ಮೂಲಕ ಬುಂದೇಲ್‌ಖಂಡ್ ಮಾತ್ರವಲ್ಲ ರಾಷ್ಟ್ರವನ್ನೇ ಅವಮಾನಿಸಿದ್ದಾರೆ" ಎಂದು ಯುಪಿಸಿಸಿ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ. ಅಲ್ಲದೆ, ಅವರು ಈ ಪುಸ್ತಕದ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು, ಇದನ್ನು ನಿಷೇಧಿಸುವ ಭರವಸೆ ಲಭಿಸಿದೆ. ಈ ಪುಸ್ತಕವನ್ನು ರಾಷ್ಟ್ರಾದ್ಯಂತ ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಬರೆಯುವಂತೆ ರಾಜ್ಯಸರಕಾರವನ್ನು ನಾವು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಪುಸ್ತಕ ರಾಣಿಯನ್ನು ಬರೆದಿರುವ ಬ್ರಿಟನ್ ಮೂಲದ ಜೈಶ್ರೀ ಮಿಶ್ರಾ ಎಂಬವರು ಬುಂದೇಲ್‌ಖಂಡ್ ರಾಣಿ ಲಕ್ಷ್ಮಿಯು ಕುರಿತ ಕಾಲ್ಪನಿಕ ಜೀವನ ಚರಿತ್ರೆ ಬರೆದಿದ್ದಾರೆ. ರಾಜ್ಯದ ಚರಿತ್ರೆಕಾರರು ಇದನ್ನು ಮಾರುಕಟ್ಟೆ ಗಿಮಿಕ್ ಎಂಬುದಾಗಿ ಲೇವಡಿ ಮಾಡಿದ್ದಾರೆ.
ಮತ್ತಷ್ಟು
ತಸ್ಲಿಮಾ ವೀಸಾ ಅವಧಿ ಮುಂದರಿಕೆ
ಪೆಟ್ರೋ ಬೆಲೆ: ಯುಪಿಎ, ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಅಧಿಸೂಚನೆ
ಆಂಧ್ರ: ಟಿಆರ್ಎಸ್ ಶಾಸಕರ ಅಮಾನತು
ಸರ್ಕಾರ್ ಕೊಲೆ: ಪಪ್ಪು ಯಾವದವ್‌ಗೆ ಜೀವಾವಧಿ