ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾನೂನು, ರೈಲ್ವೇ ಹಳಿಯನ್ನೇ ತಿರುಗಿಸಿದ ಲಾಲೂ
ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಹೊಸ ಮ್ಯಾನೇಜ್‌ಮಂಟ್ ಗುರುವಾಗಿ ಮೂಡಿಬಂದಿರಬಹುದು. ಆದರೆ ಅವರು ಸ್ವಜನ ಪಕ್ಷಪಾತದ ದುರ್ಬಲತೆಯಿಂದ ಮಾತ್ರ ಹೊರಬರಲಾಗಲಿಲ್ಲ ಎಂಬ ಅಂಶಗಳು ಅವರ ನಡವಳಿಕೆಯಿಂದ ಗೋಚರವಾಗುತ್ತಿದೆ.

ಅವರ ಭಾವಮೈದುನರಾದ ಸಾಧು ಮತ್ತು ಸುಭಾಷ್ ಯಾದವ್ ಅವರುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವಾದಗಳು ಮುತ್ತಿಕೊಂಡಿವೆ. ಅವರ ಅತ್ತೆ, ಮಾವ ಟೀಕೇಟು ರಹಿತರಾಗಿ ರೈಲಿನಲ್ಲಿ ಪ್ರಯಾಣಿಸಿದ್ದು ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ನಡೆದ ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆಗೆ ಒಂದು ವಿಶೇಷ ರೈಲಿನಲ್ಲಿ ಬಿಹಾರಿಗಳನ್ನು ತುಂಬಿಸಿ ಕಳುಹಿಸುವಂತೆ ಮಾಡಿ ವಿವಾದಕ್ಕೀಡಾಗಿದ್ದಾರೆ. ಇದೀಗ ತನ್ನ ಭಾವಮೈದುನರ ಹಳ್ಳಿಗೆ ಅನುಕೂಲವಾಗುವಂತೆ ರೈಲು ಹಳಿಯೊಂದನ್ನು ಬಗ್ಗಿಸಲು ಮುಂದಾಗಿದ್ದಾರೆ ಎಂಬುದು ಹೊಸ ಸುದ್ದಿ.

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಹತುವಾ ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಕ್‌ಪುರಕ್ಕೆ ರೈಲು ಹಳಿಯೊಂದನ್ನು ಹಾಕಲಾಗಿತ್ತು. ಈ ಹೊಸ ದಾರಿಯು ಶೇಲಾರ್ ಮತ್ತು ಫುಲ್ವಾರಿಯವನ್ನು ಸಂಪರ್ಕಿಸುತ್ತದೆ. ಇವುಗಳು ಲಾಲೂ ಮತ್ತು ಅವರ ಪತ್ನಿ ರಾಬ್ರಿದೇವಿಯರ ಹುಟ್ಟೂರುಗಳು.

ರೈಲ್ವೇ ಕಾನೂನಿನ ಪ್ರಕಾರ ಎರಡು ನಿಲ್ದಾಣಗಳ ನಡುವೆ ಕನಿಷ್ಠ ಏಳು ಕಿಲೋ ಮೀಟರ್‌ಗಳ ಅಂತರವಿರಬೇಕು. ಆದರೆ ಈ ಕಾನೂನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಳಿಗೆ ತೂರಲಾಗಿದೆ. ಈ ಎರಡು ರೈಲ್ವೇ ನಿಲ್ದಾಣಗಳ ಅಂತರ ಕೇವಲ ಎರಡೂವರೆ ಕಿಲೋಮೀಟರ್ ಮಾತ್ರ.

ನಿತೀಶ್ ಕುಮಾರ್ ಅವರು ರೈಲ್ವೇ ಸಚಿವರಾಗಿದ್ದಾಗ ಈ ಯೋಜನೆ ಮಂಜೂರಾಗಿತ್ತು. ಆದರೆ ಬಳಿಕ ರೈಲ್ವೇ ಮಂತ್ರಿಯಾದ ಲಾಲೂ, ಪ್ರಸ್ತುತ ರೈಲು ತನ್ನ ಹಾಗೂ ತನ್ನಪತ್ನಿ ರಾಬ್ರಿದೇವಿ ಮತ್ತು ತನ್ನ ನಾದಿನಿಯ ಊರು ಮುಖಾಂತರ ಹಾದುಹೋಗುವಂತೆ ಮಾಡಿದ್ದಾರೆ ಎಂಬುದಾಗಿ ಆಪಾದಿಸಲಾಗಿದೆ.
ಮತ್ತಷ್ಟು
ಸಾರ, ಮೊಯ್ಲಿಗೆ ಮಂಗಳೂರು ವಿವಿ ಡಾಕ್ಟರೇಟ್
ಉ.ಪ್ರ: ರಾಣಿ ಲಕ್ಷ್ಮಿಬಾಯಿ ಪುಸ್ತಕ ನಿಷೇಧ
ತಸ್ಲಿಮಾ ವೀಸಾ ಅವಧಿ ಮುಂದರಿಕೆ
ಪೆಟ್ರೋ ಬೆಲೆ: ಯುಪಿಎ, ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಅಧಿಸೂಚನೆ