ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಡ್ನಿ: ಲಂಚ ಆರೋಪದಲ್ಲಿ ಎಎಸ್ಐ ಬಂಧನ
ಬಹುಕೋಟಿ ಕಿಡ್ನಿ ಹಗರಣದ ಆರೋಪಿಯೊಬ್ಬನಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್(ಎಎಸ್ಐ) ರವೀಂದರ್ ಸಿಂಗ್ ಎಂಬಾತನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಎಎಸ್ಐ ಸೇರಿದಂತೆ ಏಳುಮಂದಿ ಪೊಲೀಸರ ವಿರುದ್ಧ ಕ್ರೈಂ ಬ್ರಾಂಚ್ ಬಲವಂತದ ಸುಲಿಗೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಈ ಏಳೂ ಮಂದಿ ಆರೋಪಿ ವೈದ್ಯ ಡಾ| ಉಪೇಂದ್ರನಿಂದ ಲಂಚ ಸ್ವೀಕರಿಸಿದ್ದಾರೆನ್ನಲಾಗಿದೆ.

ರವೀಂದರ್ ಸಿಂಗ್ ಬಂಧನಕ್ಕೀಡಾಗಿದ್ದರೂ, ಉಳಿದ ಪೊಲೀಸ್ ಪೇದೆಗಳು ತಲೆತಪ್ಪಿಸಿಕೊಂಡಿದ್ದಾರೆ.
ವೈದ್ಯ ಉಪೇಂದ್ರನ ಕಾರು ಚಾಲಕನಿಂದ 19 ಲಕ್ಷ ರೂಪಾಯಿ ಸ್ವೀಕರಿಸಿರುವುದಕ್ಕಾಗಿ ಎಎಸ್ಐ ರವೀಂದರ್ ಸಿಂಗ್‌ನನ್ನು ಬಂಧಿಸಿರುವುದಾಗಿ ಅಪರಾಧಿ ಪತ್ತೆದಳದ ಎಸಿಪಿ ಸತ್ಯೇಂದ್ರ ಗಾರ್ಗ್‌ ತಿಳಿಸಿದ್ದಾರೆ.

ತಲೆತಪ್ಪಿಸಿಕೊಂಡಿರುವ ಉಳಿದ ಪೊಲೀಸರ ಪತ್ತೆಗಾಗಿ ಪ್ರಯತ್ನಗಳು ಮುಂದುವರಿದಿದ್ದು ಅವರ ಬಂಧನಕ್ಕಾಗಿ ವಿವಿಧೆಡೆ ದಾಳಿ ನಡೆಸಲಾಗಿದೆ ಎಂದು ಗಾರ್ಗ್ ಹೇಳಿದ್ದಾರೆ.

ಕಿಡ್ನಿ ಹಗರಣಗಳ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಉಪೇಂದ್ರನ ಕಾರು ಚಾಲಕನಿಂದ ಈ ಏಳು ಪೊಲೀಸರು 19 ಲಕ್ಷ ರೂಪಾಯಿಯನ್ನು ಕಳೆದ ತಿಂಗಳು ಸ್ವೀಕರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಗೆಳು ಹೇಳಿವೆ.
ಮತ್ತಷ್ಟು
ಕಾನೂನು, ರೈಲ್ವೇ ಹಳಿಯನ್ನೇ ತಿರುಗಿಸಿದ ಲಾಲೂ
ಸಾರ, ಮೊಯ್ಲಿಗೆ ಮಂಗಳೂರು ವಿವಿ ಡಾಕ್ಟರೇಟ್
ಉ.ಪ್ರ: ರಾಣಿ ಲಕ್ಷ್ಮಿಬಾಯಿ ಪುಸ್ತಕ ನಿಷೇಧ
ತಸ್ಲಿಮಾ ವೀಸಾ ಅವಧಿ ಮುಂದರಿಕೆ
ಪೆಟ್ರೋ ಬೆಲೆ: ಯುಪಿಎ, ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆ
ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ