ಪಾಕಿಸ್ತಾನ ಮೂಲದ ಲಷ್ಕರೆ-ಇ-ತೋಯ್ಬಾ ಸಂಘಟನೆಯ ಪ್ರಮುಖ ಉಗ್ರರರಿಬ್ಬರನ್ನು ಮಟ್ಟ ಹಾಕುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ.
ದಕ್ಷಿಣ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಂಘಟನೆಯ ಸ್ವಯಂ ಘೋಷಿತ ಜಿಲ್ಲಾ ಕಮಾಂಡರ್ ಅಬ್ದುಲ್ ರೆಹ್ಮಾನ್ ಮತ್ತು ಮೋಯ್ನ್ ಆಹ್ಮದ್ ಮಿರ್ ಅಲಿಯಾಸ್ ನೂರಾ ಎಂಬ ಉಗ್ರರು ಹತರಾಗಿದ್ದಾರೆ. ಇವರಿಂದ ಎರಡು ಎ.ಕೆ. ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಡಿಸಿಕೊಳ್ಳಲಾಗಿದೆ.
ಪುಲ್ವಾಮ ಜಿಲ್ಲೆಯ ನಿಕ್ಲೂರು ಗ್ರಾಮದಲ್ಲಿ 55 ರಾಷ್ಟ್ರೀಯ ರೈಫಲ್ಸ್(ಆರ್ಆರ್) ಮತ್ತು ಜಮ್ಮು ಕಾಶ್ಮೀರದ ವಿಶೇಷ ಕಾರ್ಯಪಡೆ(ಎಸ್ಓಜಿ) ಗಳು ಜಂಟಿಯಾಗಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಉಗ್ರರು ಹತರಾಗಿದ್ದಾರೆ.
ಖಚಿತ ಮಾಹಿತಿಯಾಧಾರದಲ್ಲಿ ದಾಳಿ ನಡೆದಿದ್ದು, ಉಗ್ರರು ನೆಲೆಸಿದ್ದ ಮನೆಬಳಿ ಸೈನಿಕರು ತಲುಪುತ್ತಲೇ, ಉಗ್ರರು ಗುಂಡುಹಾರಿಸಿದ್ದು, ಪ್ರತಿಯಾಗಿ ಸೈನಿಕರು ಗುಂಡುಹಾರಿಸಿದರು ಎಂಬುದಾಗಿ ರಕ್ಷಣಾ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.
|