ಒರಿಸ್ಸಾದ ನಯಾಗರದಲ್ಲಿ ನಕ್ಸಲರು ನಡೆಸಿರುವ ದಾಳಿಯಲ್ಲಿ 13 ಪೊಲೀಸರು ಹಾಗೂ ನಾಗರಿಕನೋರ್ವ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಸಶಸ್ತ್ರಧಾರಿ ನಕ್ಸಲರು ಸಣ್ಣ ಪಡೆಯ ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ದಾಳಿ ನಡೆಸಿತು ಎಂಬುದಾಗಿ ವರದಿಗಳು ಹೇಳಿವೆ.
ಆಕ್ರಮಣಕ್ಕೀಡಾಗಿರುವ ನಯಾಗರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಪಡೆಗಳು ಧಾವಿಸಿದ್ದು ನಕ್ಸಲರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಈ ದಾಳಿಯಲ್ಲಿ ಮೂವರು ನಕ್ಸಲರೂ ಹತರಾಗಿದ್ದಾರೆ ಎಂದು ದೃಢಪಡಿಸಲಾರದ ಮೂಲವೊಂದು ಹೇಳಿದೆ.
ನಕ್ಸಲರು ಪೊಲೀಸ್ ಶಸ್ತ್ರಾಗಾರ ಮತ್ತು ತರಬೇತಿ ಶಾಲೆಗಳಿಗೂ ದಾಳಿ ನಡೆಸಿದ್ದು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲಪಟಾಯಿಸಿದ್ದಾರೆ ಎಂದು ಹೇಳಲಾಗಿದೆ.
|