ರಕ್ಷಣಾ ಸಂಗ್ರಹಗಳ ನೀತಿಗಳು ಮತ್ತು ರಕ್ಷಣಾ ಸಂಗ್ರಹಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪ್ರಸ್ತುತ ಪರಾಮರ್ಶೆ ಮಾಡಲಾಗುತ್ತಿದ್ದು ಅವುಗಳನ್ನು ಪಾರದರ್ಶಕ ಹಾಗೂ ಬಳಕೆ ಸ್ನೇಹಿಯನ್ನಾಗಿಸಲಾಗುವುದು ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.
ಐದನೆಯ ಅಂತಾರಾಷ್ಟ್ರೀಯ ಭೂ ಮತ್ತು ನೌಕಾ ವ್ಯವಸ್ಥೆಗಳ ಪ್ರದರ್ಶನ ಡಿಫೆಕ್ಸೋ-2008 ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಿಯಮಿತವಾಗಿ ಪರಾಮರ್ಶೆಮಾಡುವ ಮೂಲಕ ರಕ್ಷಣಾ ಸಂಗ್ರಹ ಪ್ರಕ್ರಿಯೆಯನ್ನು ಉತ್ತಮಗೊಳಿಸಲಾಗುವುದು ಎಂದು ನುಡಿದರು.
ಭಾರತದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸರಕಾರ ಮಾತ್ರ ಖರೀದಿ ಮಾಡುತ್ತಿರುವುದರಿಂದ, ನಿರ್ದಿಷ್ಟ ಅವಶ್ಯಕತೆಗಳು, ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ರಕ್ಷಣಾ ನೀತಿಗಳು ಖಾಸಗೀ ಕಂಪೆನಿಗಳು ಕೈಗೊಳ್ಳುತ್ತಿರುವ ಉತ್ಪಾದನಾ ನೀತಿಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನುಡಿದರು.
|