ಒರಿಸ್ಸಾದ ನಯಾಗರದಲ್ಲಿ ನಕ್ಸಲರು ನಡೆಸಿರುವ ದಾಳಿಯಲ್ಲಿ ಹತರಾಗಿರುವ ಪೊಲೀಸರ ಕುಟುಂಬಗಳಿಗೆ 10ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.
ಶುಕ್ರವಾರ ರಾತ್ರಿ ಮಾವೋವಾದಿ ಬಂಡುಕೋರರು ನಡೆಸಿರುವ ದಾಳಿಯಲ್ಲಿ ಮೃತರಾದ ಪೊಲೀಸರಿಗೆ ತಲಾ 10 ಲಕ್ಷ ಹಾಗೂ ಇದರಲ್ಲಿ ಬಲಿಯಾಗ ನಾಗರಿಕನೊಬ್ಬನಿಗೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿದ್ದಾರೆ. ಅಲ್ಲದೆ ಗುಂಡಿನ ಚಕಮಕಿ ವೇಳೆ ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆಯ ನೀಡುವುದಾಗಿ ಪಾಟ್ನಾಯಕ್ ಹೇಳಿದರು.
ನಕ್ಸಲ್ ಪೀಡಿತ ಪ್ರದೇಶಕ್ಕೆ ಹೆಚ್ಚುವರಿ 600 ಪೊಲೀಸ್ ಪಡೆಯನ್ನು ಕಳುಹಿಸುವುದಾಗಿ ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹೇಳಿದ್ದಾರೆ. ನಕ್ಸಲರು ಲೂಟಿ ಮಾಡಿದ ಶಸ್ತ್ರಾಗಾರಕ್ಕೆ ಪಟ್ನಾಯಕ್ ಭೇಟಿ ನೀಡಿದ್ದು, ಕೇಂದ್ರ ಸರಕಾರವುಹೆಚ್ಚುವರಿ ಭದ್ರಾತಾ ಸಿಬ್ಬಂದಿಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದೆ ಎಂದು ತಿಳಿಸಿದರು.
ಶುಕ್ರವಾರ ರಾತ್ರಿ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ಸಶಸ್ತ್ರಧಾರಿ ನಕ್ಸಲರು ನಯಾಗರದ ಸಣ್ಣ ಪಡೆಯ ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ದಾಳಿ ನಡೆಸಿತ್ತು. ನಕ್ಸಲರು ಪೊಲೀಸ್ ಶಸ್ತ್ರಾಗಾರ ಮತ್ತು ತರಬೇತಿ ಶಾಲೆಗಳಿಗೂ ದಾಳಿ ನಡೆಸಿದ್ದು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲಪಟಾಯಿಸಿದ್ದರು. ದಾಳಿಯ ವೇಳೆ 13 ಪೊಲೀಸರು ಹಾಗೂ ಓರ್ವ ನಾಗರಿಕ ಹತರಾಗಿದ್ದರು.
|