ಶನಿವಾರ ಬಂಧಿನಕ್ಕೀಡಾಗಿರುವ ಪಾಕಿಸ್ತಾನದ ಗುಪ್ತಚರ ಸೇವೆ(ಐಎಸ್ಐ)ಯ ಕೆಳಮಟ್ಟದ ಸಂಪರ್ಕದ ವ್ಯಕ್ತಿ ಭಾರತದ ಸೇನೆಯಲ್ಲಿ ಮಿಲಿಟರಿ ವಿಚಾರಣೆಗೆ ಒಳಗಾದ ಮಾಜಿ ಸೈನಿಕನೆಂಬುದಾಗಿಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಎಸ್‌ಐ ಏಜೆಂಟ್ ಮೊಹಮ್ಮದ್ ಸಯ್ಯದ್ ದೇಸಾಯಿ ಕಳೆದ ಜನವರಿಯಲ್ಲಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಸಯ್ಯದ್ ಕೆಲವು ಕೆಳಮಟ್ಟದ ಸಂಪರ್ಕಗಳನ್ನು ಸಂಧಿಸುವ ಬಗ್ಗೆ ಸುಳಿವು ಸಿಕ್ಕಿದ್ದರಿಂದ ಪುಣೆಯ ನಿರ್ದಿಷ್ಟ ಸ್ಥಳದಲ್ಲಿ ನಿಗಾ ಇರಿಸಿದ್ದು, ಸಯ್ಯದ್ ಅಲ್ಲಿಗೆ ಬರಲಿಲ್ಲವಾದರೂ ಪುಣೆಯ ಅವನ ಸಂಗಡಿಗನನ್ನು ಬಂಧಿಸಿದ್ದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೇಂದ್ರ ಸಿಂಗ್ ತಿಳಿಸಿದರು. ಪೊಲೀಸರು ಈತನ ತನಿಖೆ ನಡೆಸಿದಾಗ ಮೊಹಮ್ಮದ್ ಸಯ್ಯದ್ ಭಾರತದ ಸೇನೆಯಲ್ಲಿ ಹವಾಲ್ದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಯೋಧನೆಂಬ ವಿಷಯ ಬೆಳಕಿಗೆ ಬಂತು.
ಮಿಲಿಟರಿ ತ್ಯಜಿಸಿದ್ದ ಆತನನ್ನು ಕೋರ್ಟ್ ವಿಚಾರಣೆಗೆ ಒಳಪಡಿಸಿ ಎರಡು ವರ್ಷಗಳ ಸೆರೆವಾಸ ಶಿಕ್ಷೆಯನ್ನು ವಿಧಿಸಿತ್ತು. ಅದಾದ ಬಳಿಕ ಗುಪ್ತಚರ ಏಜೆಂಟನಾಗಿ ಪುಣೆಯ ಐಎಸ್‌ಐ ಜಾಲದ ಜತೆ ಸಂಪರ್ಕವಿರಿಸಿಕೊಂಡಿದ್ದ ಎಂದು ಸಿಂಗ್ ಹೇಳಿದರು.
|