ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ: ಮಮತಾ
ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‍ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷವು ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷವಾಗಿದ್ದ ತೃಣಮೂಲ ಕಾಂಗ್ರೆಸ್ಸಿಗೆ ದ್ರೋಹ ಬಗೆದಿದೆ ಎಂದು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ.

ಮುಂಬರುವ ಪಂಚಾಯತ್ ರಾಜ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷದೊಂದಿಗೆ ಸಮಾನ ಅಂತರವನ್ನು ಕಾಯ್ದುಕೊಂಡು ಸ್ವತಂತ್ರವಾಗಿ ಚುನಾವಣೆಯನ್ನು ಎದುರಿಸಲಿದೆ ಎಂದು ರಾಜಹಾಟ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶರದ್ ಪವಾರ ನೇತೃತ್ವದ ನ್ಯಾಷನಲಿಸ್ಟ್ ಪಕ್ಷದ ಚಿನ್ಹೆ ಗಡಿಯಾರದಡಿಯಲ್ಲಿ ಕಾಂಗ್ರೆಸ್ ಪಕ್ಷವು ತೃಣಮೂಲ ಕಾಂಗ್ರೆಸ್‌ನ 77 ಅಭ್ಯರ್ಥಿಗಳ ವಿರುದ್ಧ ಹುರಿಯಾಳುಗಳನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. 2006 ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಎನ್‌ಸಿಪಿ ಚಿನ್ಹೆಯಡಿಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಅಲ್ಲದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಪಿಐ (ಎಂ) ಕಾರ್ಯಕರ್ತರ ಜೊತೆಗೂಡಿ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿದ್ದರು. ಇತ್ತೀಚೆಗೆ ನಡೆದ ಬಾಲಘರ್ ವಿಧಾನಸಭಾ ಉಪಚುನಾವಣೆಯಲ್ಲಿ ಸಿಪಿಐ ವಿರುದ್ಧ ಒಂದಾಗಿ ಚುನಾವಣೆ ಎದುರಿಸುವುದಕ್ಕೆ ತೃಣಮೂಲ ಆಹ್ವಾನ ನೀಡಿದರೂ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಸಿಪಿಐ(ಎಂ) ವಿರುದ್ಧ ಒಟ್ಟಾಗಿ ಚುನಾವಣೆ ಎದುರಿಸುವುದಕ್ಕೆ ಸಮ್ಮತಿ ಸೂಚಿಸದೇ ಇದ್ದುದು ಕಾಂಗ್ರೆಸ್‌ನ ಸಿದ್ದಾಂತ ಏನು ಎನ್ನುವುದನ್ನು ಎತ್ತಿ ತೋರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಈ ಸಂದರ್ಭದಲ್ಲಿ ಆಪಾದಿಸಿದರು.
ಮತ್ತಷ್ಟು
ಮಾಜಿ ಸೈನಿಕ ಐಎಸ್ಐ ಏಜೆಂಟ್
ಒರಿಸ್ಸಾ ನಕ್ಸಲ್ ದಾಳಿ: ತನಿಖೆಗೆ ಆದೇಶ
ಕನ್ನಡಿಗರನ್ನು ಅವಮಾನಿಸಿಲ್ಲ: ಲಾಲೂ
ರಕ್ಷಣಾ ಸಂಗ್ರಹ ನೀತಿ ಪರಾಮರ್ಶೆ: ಆಂಟನಿ
ಪೊಲೀಸರಿಂದ ಅಧಿಕಾರ ದುರ್ಬಳಕೆ ಸಲ್ಲ: ಪಾಟೀಲ್
ಸದ್ಯವೇ ಪ್ರತಿ ಮಗುವಿಗೂ ಶಿಕ್ಷಣ ಮಸೂದೆ: ಪಿಎಂ