ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: 20 ನಕ್ಸಲರ ಹತ್ಯೆ
ಕಳೆದ ಶುಕ್ರವಾರ ರಾತ್ರಿ 13 ಪೊಲೀಸರನ್ನು ಗುಂಡಿಕ್ಕಿ ಕೊಂದಿರುವ ನಯಾಗರ ಪ್ರದೇಶದಲ್ಲಿ ಮಾವೋವಾದಿಗಳನ್ನು ಹತ್ತಿಕ್ಕಲು ನಡೆಸಿರುವ ಕೂಂಬಿಂಗ್ ಕಾರ್ಯಾಚರಣೆ ವೇಳೆ ಮಹಿಳಾ ಕೇಡರ್‌ಗಳೂ ಸೇರಿದಂತೆ ಕನಿಷ್ಠ 20 ಮಂದಿ ಮಾವೋವಾದಿ ಉಗ್ರರು ಪೊಲೀಸರ ದಾಳಿಗೆ ಬಲಿಯಾಗಿದ್ದಾರೆ.

ಕೂಂಬಿಂಗ್ ಕಾರ್ಯಾಚರಣೆ ವೇಳೆ ಮೂವರು ಭದ್ರತಾ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ನಕ್ಸಲರ ಅಟ್ಟಹಾಸ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳಾದ ನಯಾಗರ, ಗಂಜಾಮ್, ಗಜಪತಿ, ಕಂದಮಲ್ ಮತ್ತು ರಾಯಗಡ ಜಿಲ್ಲೆಗಳಲ್ಲಿ ಭಾರೀ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇಪ್ಪತ್ತು ಮಾವೋವಾದಿಗಳು ಮತ್ತು ವಿಶೇಷ ಕಾರ್ಯಪಡೆ(ಎಸ್ಒಜಿ)ಯ ಮೂವರು ಸಿಬ್ಬಂದಿಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಇದೆ ರಾಜ್ಯ ಗೃಹ ಕಾರ್ಯದರ್ಶಿ ಟಿ.ಕೆ. ಮಿಶ್ರಾ ಹೇಳಿದ್ದಾರೆ.

ಕಾರ್ಯಾಚರಣೆಯ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿರುವ ಮಿಶ್ರಾ, ನಕ್ಸಲರ ಸಾವಿನ ಸಂಖ್ಯೆ ಹೆಚ್ಚಿರಬಹುದು ಎಂದು ಹೇಳಿದ್ದಾರೆ. ಆದರೆ 20 ಮಂದಿ ಸತ್ತಿರುವ ಖಚಿತ ಮಾಹಿತಿ ಇದೆ ಎಂದು ತಿಳಿಸಿದ ಅವರು, ಎಡಿಜಿಪಿ ಎಂ.ಎಂ.ಪ್ರಹರಾಜ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಕೊನೆಯ ತನಕ ಮುಂದುವರಿಯಲಿದೆ ಎಂದು ತಿಳಿಸಿದರು.

ಶಕ್ರವಾರ ರಾತ್ರಿ ಸುಮಾರು 500 ಸಶಸ್ತ್ರದಾರಿ ನಕ್ಸಲರು ಐದು ಪೊಲೀಸ್ ನೆಲೆಗಳಿಗೆ ದಾಳಿ ಮಾಡಿ ದೊಡ್ಡ ಮೊತ್ತದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳನ್ನು ಅಪಹರಿಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 14 ಪೊಲೀಸರು ಹಾಗೂ ನಾಗರಿಕರೊಬ್ಬರು ಹತರಾಗಿದ್ದರು.
ಮತ್ತಷ್ಟು
ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ: ಮಮತಾ
ಮಾಜಿ ಸೈನಿಕ ಐಎಸ್ಐ ಏಜೆಂಟ್
ಒರಿಸ್ಸಾ ನಕ್ಸಲ್ ದಾಳಿ: ತನಿಖೆಗೆ ಆದೇಶ
ಕನ್ನಡಿಗರನ್ನು ಅವಮಾನಿಸಿಲ್ಲ: ಲಾಲೂ
ರಕ್ಷಣಾ ಸಂಗ್ರಹ ನೀತಿ ಪರಾಮರ್ಶೆ: ಆಂಟನಿ
ಪೊಲೀಸರಿಂದ ಅಧಿಕಾರ ದುರ್ಬಳಕೆ ಸಲ್ಲ: ಪಾಟೀಲ್