ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೋಮೇಶ್ ಶರ್ಮಾ, ಇತರ ಐವರಿಗೆ ಜೀವಾವಧಿ
ಕುಂಜುಮ್ ಬುಧಿರಾಜ ಕೊಲೆ ಪ್ರಕರಣ
ಕುಂಜುಮ್ ಬುಧಿರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟಿಯಾಲ ನ್ಯಾಯಾಲಯವು ದಾವುದ್ ಇಬ್ರಾಹಿಂನ ಬಲಗೈ ಬಂಟ ರೋಮೇಶ್ ಶರ್ಮಾ ಹಾಗೂ ಇತರ ಐದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣವು ಅಪರೂಪದಲ್ಲಿ ಅಪರೂಪ ಪ್ರಕರಣಗಳಡಿಯಲ್ಲಿ ಬರದಿರುವ ಕಾರಣ ಮರಣದಂಡನೆ ವಿಧಿಸುವುದಿಲ್ಲ ಎಂದು ಎಂದು ನ್ಯಾಯಾಲಯ ಹೇಳಿದೆ.

ರೋಮೇಶ್ ಶರ್ಮಾ, ಆತನ ಸೋದರಳಿಯ ಸುರೀಂದರ್ ಮಿಶ್ರಾ, ರಮೇಶ್, ಸಂತ್ರಮ್, ತೇಜೇಂದರ್ ವಿರ್ಡಿ ಅಲಿಯಾಸ್ ದೋಲಿ ಹಾಗೂ ಹೇಮಚಂದ್ ಅವರುಗಳನ್ನು ದೋಷಿಗಳೆಂದು ನ್ಯಾಯಾಲಯ ಶುಕ್ರವಾರ ಹೇಳಿತ್ತು. ಹೇಮಚಂದ್, ಸಂತ್ರಮ್ ಮತ್ತು ರಮೇಶ್ ಅವರುಗಳನ್ನು ಭಾರತೀಯ ದಂಡ ಸಂಹಿತೆ 302ರಡಿ ತಪ್ಪಿತಸ್ಥರೆಂದು ತೀರ್ಮಾನಿಸಿದ್ದರೆ, ರೋಮೇಶ್ ಶರ್ಮಾ, ಸುರಿಂದರ್ ಮಿಶ್ರಾ ಮತ್ತು ದೋಲಿ ಅವರುಗಳನ್ನು ಸೆಕ್ಷನ್ 120ಬಿಯಡಿಯಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪಿತ್ತಿದೆ. ಜಸ್‌ಪ್ರೀತ್ ವಿರ್ಡಿ ಅಲಿಯಾಸ್ ಸೋನು ಈ ಪ್ರಕರಣದಲ್ಲಿ ನಿರ್ದೋಷಿಯೆಂದು ಹೇಳಲಾಗಿದೆ.

ನ್ಯಾಯಾಲಯವು ರೋಮೇಶ್ ಶರ್ಮಾನಿಗೆ 50 ಸಾವಿರ ರೂಪಾಯಿಗಳ ದಂಡವನ್ನೂ ಹೇರಿದೆ.
ಜನವರಿ 30ರಂದು ಪ್ರಕರಣದ ಅಂತಿಮ ವಾದವಿವಾದ ಮುಗಿದಿದ್ದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‌.ಪಿ.ಗಾರ್ಗ್ ಅವರು ತೀರ್ಪನ್ನು ಕಾಯ್ದಿಟ್ಟಿದ್ದರು.

ಉದಯೋನ್ಮುಖ ಫ್ಯಾಶನ್ ಡಿಸೈನರ್ ಕುಂಜುಮ್ ಬುಧಿರಾಜಳನ್ನು 1999ರ ಮಾರ್ಚ್ 20ರಂದು ಮೆಹ್ರಾಲಿಯಲ್ಲಿರುವ ರೊಮೇಶ್ ಶರ್ಮಾನ ತೋಟದ ಮನೆಯಲ್ಲಿ ಕೊಲ್ಲಲಾಗಿತ್ತು. ಕೊಲೆಯ ವೇಳೆಗೆ ಶರ್ಮಾ ತಿಹಾರ್ ಜೈಲಿನಲ್ಲಿದ್ದರೂ, ಈತನೆ ಕೊಲೆಯ ಪ್ರಮುಖ ರೂವಾರಿ ಎಂಬ ಅಂಶ ವಿಚಾರಣೆಯ ವೇಳೆ ಬೆಳಕಿಗೆ ಬಂದಿತ್ತು. ಮೃತ ಕುಂಜುಮ್ ಶರ್ಮಾನ ಪ್ರೇಯಸಿಯಾಗಿದ್ದಳು.
ಮತ್ತಷ್ಟು
ಒರಿಸ್ಸಾ: 20 ನಕ್ಸಲರ ಹತ್ಯೆ
ಕಾಂಗ್ರೆಸ್‌ನೊಂದಿಗೆ ಮೈತ್ರಿ ಇಲ್ಲ: ಮಮತಾ
ಮಾಜಿ ಸೈನಿಕ ಐಎಸ್ಐ ಏಜೆಂಟ್
ಒರಿಸ್ಸಾ ನಕ್ಸಲ್ ದಾಳಿ: ತನಿಖೆಗೆ ಆದೇಶ
ಕನ್ನಡಿಗರನ್ನು ಅವಮಾನಿಸಿಲ್ಲ: ಲಾಲೂ
ರಕ್ಷಣಾ ಸಂಗ್ರಹ ನೀತಿ ಪರಾಮರ್ಶೆ: ಆಂಟನಿ