ಬಹುಕೋಟಿ ಕಿಡ್ನಿ ಹಗರಣದ ಕಿಂಗ್‌ಪಿನ್ ವೈದ್ಯ ಅಮಿತ್ ಕುಮಾರ್‌ನನ್ನು ತೀಸ್ ಹಜಾರಿ ನ್ಯಾಯಾಲಯ ಫೆ.29ರ ತನಕ ಸಿಬಿಐ ವಶಕ್ಕೊಪ್ಪಿಸಿದೆ.
ಜೀವನ್ ಕುಮಾರ್‌ನನ್ನು ಸಿಬಿಐ, ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿ ಕಳೆದ ರಾತ್ರಿ ಬಂಧಿಸಿತ್ತು. ಅಕ್ರಮ ಕಿಡ್ನಿಕಸಿ ಜಾಲದಲ್ಲಿ ಈತನೂ ತೊಡಗಿದ್ದಾನೆಂಬ ಆರೋಪದಲ್ಲಿ ಬಂಧನಕ್ಕೀಡು ಮಾಡಲಾಗಿದೆ.
ಜನವರಿ 24ರಂದು ಗುಡಗಾಂವ್‌ನಲ್ಲಿ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ಜೀವನ್ ಬೇಕಾಗಿದ್ದಾನೆ. ಸಿಬಿಐ, ಅಮಿತ್ ಕುಮಾರ್‌ನೊಂದಿಗೆ ಈತನ ಬಂಧನಕ್ಕಾಗಿಯೂ ಇಂಟರ್‌ಪೋಲ್ ಕಟ್ಟೆಚ್ಚರ ನೋಟೀಸ್ ಹೊರಡಿಸಿತ್ತು. ಅಮಿತ್ ಕುಮಾರ್ ನೇಪಾಳದಲ್ಲಿ ಬಂಧನಕ್ಕೀಡಾಗಿದ್ದು ಬಳಿಕ ಆತನನ್ನು ಭಾರತಕ್ಕೊಪ್ಪಿಸಲಾಗಿದೆ.
|