ಆರು ಸೂಪರ್ ಹರ್ಕ್ಯುಲಸ್ ಸಿ-130ಜೆ ಸೇನಾ ಸಾರಿಗೆ ವಿಮಾನಗಳಿಗೆ ಭಾರತವು ಲೋಖೀಡ್ ಮಾರ್ಟಿನ್ ಕಾರ್ಪೋರೇಷನ್‌ಗೆ ಆದೇಶ ನೀಡಿದೆ.
ನೂರು ಕೋಟಿ ಡಾಲರ್ ಮೊತ್ತದ ಈ ವ್ಯವಹಾರ ಒಪ್ಪಂದದ ಕುರಿತು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತ ಸಮ್ಮತಿ ಪತ್ರಕ್ಕೆ ಜನವರಿ ತಿಂಗಳಲ್ಲಿ ಸಹಿ ಮಾಡಲಾಗಿದೆ ಎಂದು ಲೋಖೀಡ್ ಮಾರ್ಟಿನ್‌ನ ಭಾರತದ ಉಸ್ತುವಾರಿಯ ಉಪಾಧ್ಯಕ್ಷ ಒರ್ವಿಲ್ಲೆ ಪ್ರಿನ್ಸ್ ಅವರನ್ನು ಉಲ್ಲೇಖಿಸಿ ಡೋ ಜೋನ್ಸ್ ನ್ಯೂಸ್‌ವೈರ್ಸ್ ಹೇಳಿದೆ. ಈ ವಿಮಾನಗಳನ್ನು 2011ರ ಬಳಿಕ ಹಂತಹಂತವಾಗಿ ಸರಬರಾಜು ಮಾಡಲಾಗುವುದು.
ಪ್ರಸ್ತುತ ವ್ಯವಹಾರದ ಕುರಿತು ಹಿರಿಯ ವಾಯು ಸೇನಾ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರಾದರೂ ವಿವರ ನೀಡಲು ನಿರಾಕರಿಸಿದ್ದಾರೆ. ಶೀತಲ ಸಮರದ ವೇಳೆ ಅಮೆರಿಕದೊಂದಿಗೆ ಭಾರತದ ಸಂಬಂಧವು ಉದ್ವಿಗ್ನತೆಯಿಂದ ಕೂಡಿದ್ದ ಕಾರಣ, ಭಾರತದ ಬಳಿ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳಿಲ್ಲ. ರಷ್ಯ ನಿರ್ಮಿತ ಮಿಗ್ ಫೈಟರ್‌ಗಳು, ಬ್ರಿಟನ್ನಿನ ಜಾಗ್ವಾರ್ ಮತ್ತು ಫ್ರಾನ್ಸಿನ ಮಿರೇಜ್‌ಗಳನ್ನು ಅದು ಹೊಂದಿದೆ. 2004ರಲ್ಲಿ ಭಾರತವು ಸುಧಾರಿತ ಜೆಟ್ ತರಬೇತು ವಿಮಾನಗಳಿಗಾಗಿ ಬ್ರಿಟನ್ನಿನ ಬಿಎಇ ಸಿಸ್ಟಂಗಳಿಗೆ ಆದೇಶ 150 ಕೋಟಿ ಡಾಲರ್‌ಗಳ ಆದೇಶವಿತ್ತಿತ್ತು.
ದೆಹಲಿ ನಡೆಯುತ್ತಿರುವ ಭಾರತದ ಅಂತಾರಾಷ್ಟ್ರೀಯ ಭೂ ಮತ್ತು ನೌಕಾ ವ್ಯವಸ್ಥೆಗಳ ಪ್ರದರ್ಶನ ಡೆಫ್ಎಕ್ಸ್‌ಫೋ2008 ರಲ್ಲಿ ದಿ ಬೆತೆಸ್ದಾ, ಮೇರಿಲ್ಯಾಂಡ್ ಮೂಲದ ಲೋಖೀಡ್ ಮಾರ್ಟಿನ್ ಕಾರ್ಪೋರೇಷನ್ ಭಾಗವಹಿಸುತ್ತಿದೆ.
ಜಂಟಿ ಉದ್ಯಮಕ್ಕಾಗಿ ಲೋಖೀಡ್ ಮಾರ್ಟಿನ್ ಭಾರತದ ಕಂಪೆನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಪ್ರಿನ್ಸ್ ನುಡಿದರಾದರೂ ವಿವರಣೆ ನೀಡಲು ನಿರಾಕರಿಸಿದರು.
|