ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರು: ಒರಿಸ್ಸಾ ಪೊಲೀಸರಿಂದ ಶಸ್ತ್ರಾಸ್ತ್ರ ಪತ್ತೆ
ಮವೋವಾದಿ ಉಗ್ರರ ದಾಳಿಗೀಡಾಗಿರುವ ನಯಾಗರದಲ್ಲಿ ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರು ಸೋಮವಾರ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಬಂದೂಕುಗಳು, ಗ್ರೆನೇಡ್ ಲಾಂಚರ್, ಕಾಡತೂಸುಗಳು ಸೇರಿವೆ.

ಆದರೆ, ಇದು ಕಳೆದ ಶುಕ್ರವಾರ ಸುಮಾರು 500 ನಕ್ಸಲರು ಏಕಾಏಕಿ ಪೊಲೀಸ್ ಶಸ್ತ್ರಾಗಾರದ ಮೇಲೆ ದಾಳಿ ಮಾಡಿ ಅಪಹರಿಸಿರುವ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಲ್ಲ ಎಂದು ವರದಿ ಹೇಳಿದೆ.

ಕಳೆದ ಶುಕ್ರವಾರ ರಾತ್ರಿ ಪೊಲೀಸ್ ಶಸ್ತ್ರಾಗಾರ ಮೇಲೆ ದಾಳಿ ನಡೆಸಿದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 14 ಮಂದಿ ಪೊಲೀಸರು ಹಾಗೂ ನಾಗರಿಕನೋರ್ವ ಮೃತಪಟ್ಟಿದ್ದ.

ಪ್ರತಿಯಾಗಿ ಪೊಲೀಸರು ನಡೆಸುತ್ತಿರುವ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಕನಿಷ್ಠ 20 ನಕ್ಸಲರು ಹತರಾಗಿದ್ದಾರೆ.
ಮತ್ತಷ್ಟು
ಶಾಸಕನಿಗೆ 'ಸರಿಯಾದ' ಶಿಕ್ಷೆ ನೀಡಿದ ನ್ಯಾಯಾಲಯ
ಬಿಹಾರದ ಮಣ್ಣನ್ನು ಕಣ್ಣಿಗೊತ್ತಿಕೊಂಡ ರಾಮ್‌ಗುಲಾಮ್
6 ಹರ್ಕ್ಯುಲಸ್ ವಿಮಾನ ಖರೀದಿಗೆ ಭಾರತ
ಕಿಡ್ನಿ: ಬಂಧಿತ ಜೀವನ್ ಸಿಬಿಐ ವಶಕ್ಕೆ
ರೋಮೇಶ್ ಶರ್ಮಾ, ಇತರ ಐವರಿಗೆ ಜೀವಾವಧಿ
ಒರಿಸ್ಸಾ: 20 ನಕ್ಸಲರ ಹತ್ಯೆ